ಚುನಾವಣೆ : ಬಿಗಿ ಭದ್ರತೆಗೆ 1.56 ಲಕ್ಷ ಪೊಲೀಸರ ನಿಯೋಜನೆ

ಬುಧವಾರ, 10 ಮೇ 2023 (11:44 IST)
ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆಯ ಮತದಾನಕ್ಕೆ ಎರಡು ದಿನಗಳು ಬಾಕಿ ಇದೆ. ಮತದಾನ ದಿನದಂದು ರಾಜ್ಯದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಬಂದೋಬಸ್ತ್ ಗಾಗಿ ಬರೋಬ್ಬರಿ 1.56 ಲಕ್ಷ ಪೊಲೀಸರ ನಿಯೋಜನೆ ಮಾಡಲಾಗಿದೆ.

ರಾಜ್ಯದ 84,119 ಸಾವಿರ ಪೊಲೀಸರು, 304 ಡಿವೈಎಸ್ಪಿ, 991 ಇನ್ಸ್ಪೆಕ್ಟರ್, 20610 ಪಿಎಸ್ಐ ಹಾಗೂ ಹೊರರಾಜ್ಯದಿಂದ 8,500 ಪೊಲೀಸರು, 650 ಸಿಎಪಿಎಫ್ ತುಕಡಿಗಳು ನಿಯೋಜನೆ ಮಾಡಲಾಗಿದೆ. ಒಟ್ಟು 1.56 ಲಕ್ಷ ಪೊಲೀಸರಿಂದ ಮತದಾನದಿಂದು ಬಂದೋಬಸ್ತ್ ಏರ್ಪಡಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ