ಅಲ್ಪಸಂಖ್ಯಾತಳಾಗಿದ್ದರಿಂದ ಚುನಾವಣೆಯಲ್ಲಿ ಸೋಲನುಭವಿಸಿದೆ: ಮಮತಾ

ಮಂಗಳವಾರ, 29 ಆಗಸ್ಟ್ 2017 (18:30 IST)
ನಾನು ಅಲ್ಪಸಂಖ್ಯಾತಳಾಗಿದ್ದರಿಂದ ಕಳೆದ 2008ರ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸಿ ಸೋಲನುಭವಿಸಿದೆ ಎಂದು ಮಾಜಿ ಸಿಎಂ ದಿವಂಗತ ರಾಮಕೃಷ್ಣ ಹೆಗಡೆ ಪುತ್ರಿ ಮಮತಾ ನಿಚ್ಚಾನಿ ಹೇಳಿದ್ದಾರೆ. 

ನಗರದ ವಿದ್ಯಾಭವನದಲ್ಲಿ ಮಾಜಿ ಸಿಎಂ ದಿವಂಗತ ರಾಮಕೃಷ್ಣ ಹೆಗಡೆಯವರ 91ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹೆಗಡೆ ತಮ್ಮ ಕಾರ್ಯಕ್ರಮಗಳಿಂದ ಜನಾನುರಾಗಿದ್ದರು ಎಂದು ಬಣ್ಣಿಸಿದರು. 
 
ದಿವಂಗತ ರಾಮಕೃಷ್ಣ ಹೆಗಡೆ ಅವರ ಭಾವಚಿತ್ರಕ್ಕೆ ಮಮತಾ ಸೇರಿದಂತೆ ಇತರ ಗಣ್ಯರು ಶೂ ಧರಿಸಿಯೇ ಪುಷ್ಪನಮನಗೈದಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿತು.
 
ನಾನು ಅಲ್ಪಸಂಖ್ಯಾತಳು ಅಂದರೆ ಜಾತಿಯಲ್ಲಿ ಬ್ರಾಹ್ಮಣ ಮಹಿಳೆ. ನನ್ನ ಬಳಿ ಹಣ ಬಲವಿಲ್ಲ, ದೇಹ ಬಲವಂತೂ ಇಲ್ಲವೇ ಇಲ್ಲ. ಇದು ಚುನಾವಣೆ ಸುಧಾರಣೆಗೆ ಕೈಗನ್ನಡಿಯಾಗಿದೆ ಎಂದು ತಿಳಿಸಿದ್ದಾರೆ.
 
ಕಾರ್ಯಕ್ರಮದಲ್ಲಿ ಸಚಿವ ಎಚ್.ಕೆ.ಪಾಟೀಲ್, ಬಸವರಾಜ ರಾಯರೆಡ್ಡಿ, ಜೆಡಿಯು ಮುಖಂಡ ಎಂಪಿ ನಾಡಗೌಡ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ