ಜೋಡೋ ಯಾತ್ರೆ ವೇಳೆ ವಿದ್ಯುತ್ ಅವಘಡ!

ಸೋಮವಾರ, 17 ಅಕ್ಟೋಬರ್ 2022 (12:16 IST)
ಬಳ್ಳಾರಿ : ಕಳೆದ 1 ತಿಂಗಳಿಂದ ನಡೆಯುತ್ತಿರುವ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಪಾದಯಾತ್ರೆ ಇಂದು ಆಂಧ್ರಪ್ರದೇಶದ ಗಡಿ ತಲುಪಿದೆ.

ಮಧ್ಯಾಹ್ನ ಬಳ್ಳಾರಿಯ ಗ್ರಾಮೀಣ ಭಾಗದ ಮೋಕಾ ಗ್ರಾಮಕ್ಕೆ ತಲುಪಿದ್ದು, ಈ ವೇಳೆ ಮೋಕಾವಗ್ರಾದ ಜನರು ರಾಹುಲ್ ಅವರನ್ನು ಅದ್ಧೂರಿಯಾಗಿ ಸ್ವಾಗತ ಮಾಡಿಕೊಂಡಿದ್ದಾರೆ.

ರಾಹುಲ್ ಅವರನ್ನು ನೋಡಲು ಅಂಗಡಿ ಬಳಿಯಲ್ಲಿ ಜನರು ನಿಂತಿದ್ದು, ಈ ವೇಳೆ ಕಬ್ಬಿಣದ ರಾಡ್ಗೆ ವಿದ್ಯುತ್ ತಂತಿಗೆ ತಾಗಿ, ಸುಮಾರು ಐದು ಜನರಿಗೆ ಶಾಕ್ ತಗುಲಿದೆ. ಮೋಕಾ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಣ್ಣ ದೊಡ್ಡಪ್ಪ ಸಂತೋಷ್ ಸೇರಿದಂತೆ ಐವರಿಗೆ ವಿದ್ಯುತ್ ಶಾಕ್ ತಗುಲಿ ಗಾಯಗಳಾಗಿವೆ. 

ಗಾಯಾಳುಗಳನ್ನು ಮೋಕಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲ ಸಮಯದ ನಂತರ ಆಸ್ಪತ್ರೆಗೆ ರಾಗಾ ಭೇಟಿ ನೀಡಿದರು. ಗಾಯಾಳುಗಳ ಸ್ಥಿತಿ ವಿಚಾರಿಸಿ, ಸಾಂತ್ವನ ಹೇಳಿದರು. ಗಾಯಾಳುಗಳಿಗೆ ರಾಹುಲ್ ಗಾಂಧಿ ತಲಾ 1 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ