ವಿದ್ಯುತ್ ದರ ಏರಿಕೆ ಪರಿಹಾರ ಅಲ್ಲ-ಪಿ.ರವಿಕುಮಾರ್

geetha

ಗುರುವಾರ, 22 ಫೆಬ್ರವರಿ 2024 (19:20 IST)
ಬೆಂಗಳೂರು-ನಗರದಲ್ಲಿರುವ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಎಸ್ಕಾಂ) ಕಾಪೆರ್ರೇಟ್ ಕಚೇರಿಯಲ್ಲಿ ನಡೆದ ಕೆಇಆರ್‍ಸಿ ಸಾರ್ವಜನಿಕ ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಪಿ.ರವಿಕುಮಾರ್ ನಷ್ಟ ಸರಿದೂಗಿಸಲು ವಿದ್ಯುತ್ ದರ ಏರಿಕೆ ಪರಿಹಾರವಲ್ಲ ಎಂದು ತಿಳಿಸಿದ್ದಾರೆ.
 
ಶೇ. 0.57 ದರ ಏರಿಕೆಯ ವಿಚಾರವಾಗಿ ಪ್ರತಿಕ್ರಿಯಿಸಿದರು. ನಷ್ಟವನ್ನು ಸರಿದೂಗಿಸಲು ವಿದ್ಯುತ್ ದರ ಏರಿಕೆಯೊಂದೇ ಪರಿಹಾರವಲ್ಲ. ದರ ಏರಿಸಿದರೆ ಗ್ರಾಹಕರಿಗೆ ದೊಡ್ಡ ಹೊರೆಯಾಗುತ್ತದೆ. ಎಸ್ಕಾಂ ವಿತರಣಾ ನಷ್ಟವನ್ನು ತಡೆಯಬೇಕು, ಅನಗತ್ಯ ವೆಚ್ಚಗಳನ್ನು ನಿರ್ಬಂಧಿಸಬೇಕು ಎಂದು ಅವರು ಸಲಹೆ ನೀಡಿದರು.
 
ಶೀಘ್ರದಲ್ಲಿ ಗ್ರಾಹಕರ ಕುಂದುಕೊರತೆಗಳನ್ನು ಪರಿಹರಿಸಲು ಗ್ರಾಹಕರ ಹಿತರಕ್ಷಣಾ ವೇದಿಕೆ ಪ್ರಾರಂಭಿಸುವ ಭರವಸೆ ನೀಡಿದರು. ವಿದ್ಯುತ್ ಉತ್ಪಾದಿಸಲು ಸೋಲಾರ್ ರೂಪ್ ಟಾಪ್ ಫೋಟೋ ವೋಲ್ಟಾಯಿಕ್ (ಎಸ್‍ಆರ್‍ಟಿಪಿವಿ) ಹೊಂದಿದ್ದು, ಅದನ್ನು ಎಸ್ಕಾಂಗೆ ನೀಡುತ್ತೇವೆ ಎಂದು ಈ ಸಂದರ್ಭದಲ್ಲಿ ಗ್ರಾಹಕರು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ