ಆನೆ ಕಾಡಿಗಟ್ಟಿದ ಅರಣ್ಯಾಧಿಕಾರಿಗಳು

ಸೋಮವಾರ, 2 ಜನವರಿ 2023 (17:22 IST)
ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಚಿಕ್ಕರಸಿನಕೆರೆಯಲ್ಲಿ ಒಂಟಿ ಸಲಗವೊಂದು ಓಡಾಡಿತ್ತು. ಗ್ರಾಮದ ಶಿವಲಿಂಗೇಗೌಡರ ಜಮೀನಿನಲ್ಲಿ ಆನೆ ಓಡಾಡಿದೆ. ಆನೆ ಕಂಡು ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ಗ್ರಾಮಸ್ಥರು, ಒಂಟಿ ಸಲಗ ಆರ್ಭಟದ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ. ನಾಡಿನಿಂದ ಒಂಟಿ ಸಲಗವನ್ನು ಕಾಡಿಗೆ ಓಡಿಸಲು ಗ್ರಾಮಸ್ಥರು ಹರಸಾಹಸ ಪಟ್ಟಿದ್ದಾರೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಸತತ ಪ್ರಯತ್ನದಿಂದ ಆನೆಯನ್ನು ಕಾಡಿಗೆ ಓಡಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ