ಮೂರು ದಿನಗಳ ಕಾಲ ಅದ್ಧೂರಿಯಿಂದ ನಡೆದ ಬಾಹುಬಲಿ ಮಹಾಮಜ್ಜನ ಇಂದು ಸಂಪನ್ನಗೊಂಡಿತು.
ಇಂದು ಮೂರನೇ ಹಾಗೂ ಕೊನೆ ದಿನದ ಮಹಾಮಜ್ಜನ ನಡೆಯುತ್ತಿದೆ. ಇಂದು 8.45 ಕ್ಕೆ ಎರಡನೇ ದಿನದ ಮಹಾಮಜ್ಜನ ಆರಂಭಗೊಂಡಿದೆ. ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಮಹಾಮಸ್ತಕಾಭಿಷೇಕ ಇದಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಶ್ರೀಕ್ಷೇತ್ರದಲ್ಲಿ ಭಕ್ತರ ದಂಡು ಸೇರಿದೆ.
13 ಬಗೆಯ ದ್ರವ್ಯಾಭಿಷೇಕ ಕ್ಷೀರ, ಹರಿತ, ಶ್ರೀಗಂಧ, ಅಷ್ಟಚಂದನ, ಚಂದನ, ಕೇಸರ, ಸೀಯಾಳ, ಕಷಾಯ, ಇಕ್ಷುರಸ, ಶ್ವೇತ ಕಲ್ಯಾಚೂರ್ಣ, ರಜತ ಪುಷ್ಪವೃಷ್ಟಿ, ಚತುಷ್ಕೋನ ಕಳಸ, ಶಾಂತಿಧಾರ ಮಹಾಮಜ್ಜನ ನಡೆಯುತ್ತಿದೆ.
1008 ಕುಂಭಗಳಲ್ಲಿ ದ್ರವ್ಯಾಭಿಷೇಕ ಹಿಡಿದು ಮೆರವಣಿಗೆ ನಡೆಸಲಾಗಿದೆ. ಶ್ರೀಕ್ಷೇತ್ರ ಧರ್ಮಸ್ಥಳದ ಚಂದ್ರನಾಥ ಬಸದಿಯಿಂದ ಮೆರವಣಿಗೆ ಆರಂಭಗೊಂಡಿತು. ರತ್ನಗಿರಿ ಬೆಟ್ಟಕ್ಕೆ 1008 ಕಳಸಗಳನ್ನು ತೆಗೆದುಕೊಂಡು ಹೋಗುವ ಮೆರವಣಿಗೆ ಗಮನ ಸೆಳೆಯಿತು. ದೇವಳದ ಆನೆಗಳು, ಕಲಾತಂಡಗಳು ಮೆರಣಿಗೆಯ ಅಂದ ಹೆಚ್ಚಿಸಿದವು.