ಸೂಲಗಿತ್ತಿ ನರಸಮ್ಮ ಆಸ್ಪತ್ರೆಗೆ ದಾಖಲು
ಪದ್ಮಶ್ರೀ ಪುರಸ್ಕೃತ ಡಾ. ಸೂಲಗಿತ್ತಿ ನರಸಮ್ಮ ಅನಾರೋಗ್ಯಕ್ಕೆ ಒಳಗಾಗಿದ್ದಾರೆ.
ಪದ್ಮಶ್ರೀ ಪುರಸ್ಕೃತ ಡಾ. ಸೂಲಗಿತ್ತಿ ನರಸಮ್ಮ ಅನಾರೋಗ್ಯಕ್ಕೆ ಒಳಗಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಕಳೆದ 9 ದಿನಗಳಿಂದ ಅನಾರೋಗ್ಯದಿಂದ ನರಸಮ್ಮ ಬಳಲುತ್ತಿದ್ದರು. ತುಮಕೂರಿನ ಸಿದ್ದಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಉಸಿರಾಟ ತೊಂದರೆ ಯಿಂದ ಬಳಲುತ್ತಿದ್ದ ನರಸಮ್ಮರನ್ನು ಹೆಚ್ಚಿನ ಚಿಕಿತ್ಸೆ ಗೆ ಬಿಜಿಎಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಪೊಲೀಸ್ ಬೆಂಗಾವಲು ವಾಹನದೊಂದಿಗೆ ಆ್ಯಂಬುಲೆನ್ಸ್ ನಲ್ಲಿ ರವಾನೆ ಮಾಡಲಾಗಿದೆ.