ಬೋಟ್ ಇಂಜಿನ್ ನಲ್ಲಿ ದೋಷ : ಅದರಲ್ಲಿದ್ದವರ ಪಾಡು ಏನಾಯಿತು?

ಬುಧವಾರ, 18 ಸೆಪ್ಟಂಬರ್ 2019 (14:59 IST)
ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ಕರ್ನಾಟಕ ಮೂಲದ ಎನ್ಎಸ್ ಜಿ ಎಂಬ ಹೆಸರಿನ ಬೋಟ್ ಸಮುದ್ರ ನಡುವೆ ತಾಂತ್ರಿಕ ದೋಷಕ್ಕೆ ಒಳಗಾಗಿದೆ.

ತಾಂತ್ರಿಕ ದೋಷದಿಂದ ಸಮುದ್ರದಲ್ಲಿ ಸಿಲುಕಿಕೊಂಡಿದ್ದ ಮೀನುಗಾರಿಕಾ ಬೋಟ್ ಹಾಗೂ ಅದರಲ್ಲಿದ್ದ 23 ಮಂದಿ ಮೀನುಗಾರರನ್ನು ಭಾರತೀಯ ಕೋಸ್ಟ್ ಗಾರ್ಡ್ ರಕ್ಷಿಸಿದೆ. ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ಕರ್ನಾಟಕ ಮೂಲದ ಎನ್ಎಸ್ ಜಿ ಎಂಬ ಹೆಸರಿನ ಬೋಟ್ ಭಟ್ಕಳ ಸಮೀಪದ ಸಮುದ್ರ ತೀರದಿಂದ ಸುಮಾರು 30 ನಾಟಿಕಲ್ ಮೈಲು ದೂರದಲ್ಲಿರೋ ಮಾವಿನಕುರ್ಲೆ ಎಂಬಲ್ಲಿ ಇಂಜಿನ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು.

ಈ ಮೀನುಗಾರಿಕಾ ಬೋಟ್ ನಲ್ಲಿ 23 ಮಂದಿ ಮೀನುಗಾರರಿದ್ದರು. ಮೀನುಗಾರಿಕಾ ಬೋಟ್ ಅಪಾಯದಲ್ಲಿರುವ ಬಗ್ಗೆ ಮಾಹಿತಿಯನ್ನು ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದ ಭಾರತೀಯ ಕೋಸ್ಟ್ ಗಾರ್ಡ್ ಶಿಫ್ ರಾಜದೂತ್ ಗೆ ನೀಡಲಾಗಿತ್ತು. ಕೂಡಲೇ ಕಾರ್ಯಾಚರಣೆಗೆ ಇಳಿದ ಕೋಸ್ಟ್ ಗಾರ್ಡ್ ಶಿಫ್ ರಾಜದೂತ್, ತಾಂತ್ರಿಕ ದೋಷದಿಂದ ಸಮುದ್ರದಲ್ಲಿ ಲಂಗರು ಹಾಕಿದ್ದ ಮೀನುಗಾರಿಕಾ ಬೋಟ್ ನ ತಾಂತ್ರಿಕ ದೋಷ ಸರಿಪಡಿಸಲು ಪ್ರಯತ್ನಿಸಿದೆ.

ಆದರೆ ಇಂಜಿನ್ ತಾಂತ್ರಿಕ ದೋಷ ಸರಿಯಾಗದ ಕಾರಣ ಬೋಟ್ ನಲ್ಲಿದ್ದ 23 ಮಂದಿ ಮೀನುಗಾರರನ್ನು ರಕ್ಷಿಸಿದೆ. ನಂತರ ಸಮುದ್ರದಲ್ಲಿ ಮೀನುಗಾರಿಕೆಯಲ್ಲಿ ನಿರತವಾಗಿದ್ದ ಮತ್ತೊಂದು ಮೀನಗಾರಿಕಾ ಬೋಟ್ ಪವನಸುತ ಮೂಲಕ ಇಂಜಿನ್ ವೈಫಲ್ಯ ಹೊಂದಿದ ಬೋಟ್ ನ್ನು ಭಟ್ಕಳ ಸಮುದ್ರ ತೀರಕ್ಕೆ ತರಲಾಗಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ