ಬಹಿರಂಗ ಸಭೆ ನಡೆಸುವ ಮೂಲಕ ಈಶ್ವರಪ್ಪ ಪಕ್ಷಕ್ಕೆ ಡ್ಯಾಮೇಜ್ ಮಾಡಿದ್ದಾರೆ: ಆರ್. ಅಶೋಕ್
ಈಶ್ವರಪ್ಪನವರ ಭಿನ್ನರಾಗಕ್ಕೆ ಶಿವಮೊಗ್ಗದ ಸ್ಥಳೀಯ ರಾಜಕೀಯ ಕಾರಣ. ಇದನ್ನ ದೊಡ್ಡ ಭಿನ್ನಮತವೆಂದು ಬಿಂಬಿಸುವುದು ಸರಿಯಲ್ಲ. ವರಿಷ್ಠರು ಎಲ್ಲವನ್ನೂ ಸರಿ ಮಾಡುತ್ತಾರೆ ಎಂದು ಆರ್. ಅಶೋಕ್ ಹೇಳಿದ್ದಾರೆ. ಈ ಮಧ್ಯೆ, ಬೆಂಗಳೂರಿಗೆ ಬರುತ್ತಿರುವ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್ ಮುಖಂಡರ ಜೊತೆ ಸಭೆ ನಡೆಸುವ ಸಾಧ್ಯತೆ ಇದೆ.