ತಮಿಳು ನಾಡಗೀತೆ ನಿಲ್ಲಿಸಿ ಕನ್ನಡದ ನಾಡಗೀತೆ ಹಾಕಿಸಿದ ಈಶ್ವರಪ್ಪ

ಗುರುವಾರ, 27 ಏಪ್ರಿಲ್ 2023 (15:04 IST)
ಶಿವಮೊಗ್ಗ : ವಿಧಾನಸಭಾ ಚುನಾವಣೆ ಹಿನ್ನೆಲೆ ತಮಿಳು ಭಾಷಿಗ ಮತದಾರರ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಶಿವಮೊಗ್ಗದಲ್ಲಿ ತಮಿಳು ಭಾಷಿಗರ ಸಮಾವೇಶ ಆಯೋಜನೆ ಮಾಡಿದ್ದಾಗ ಕಾರ್ಯಕರ್ತರೊಬ್ಬರು ತಮಿಳಿನ ನಾಡಗೀತೆ ಹಾಕಿದ್ದರು.
 
ಈ ವೇಳೆ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅದನ್ನು ನಿಲ್ಲಿಸಿ ಕನ್ನಡದ ನಾಡಗೀತೆಯನ್ನು ಹಾಕಿಸಿದ ಪ್ರಸಂಗ ನಡೆಯಿತು. ಶಿವಮೊಗ್ಗ ನಗರ ಹಾಗೂ ಭದ್ರಾವತಿ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಮಿಳು ಮತದಾರರಿದ್ದಾರೆ.

ಈ ಹಿನ್ನೆಲೆ ಶಿವಮೊಗ್ಗದ ಎನ್ಇಎಸ್ ಮೈದಾನದಲ್ಲಿ ಬಿಜೆಪಿ ತಮಿಳು ಭಾಷಿಗರ ಸಮಾವೇಶ ಆಯೋಜನೆ ಮಾಡಿತ್ತು. ಸಮಾವೇಶದಲ್ಲಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ, ಮಾಜಿ ಸಚಿವ ಈಶ್ವರಪ್ಪ, ಅಭ್ಯರ್ಥಿ ಚನ್ನಬಸಪ್ಪ ಭಾಗಿಯಾಗಿದ್ದರು.

ಈ ವೇಳೆ ಸಮಾವೇಶದಲ್ಲಿ ತಮಿಳು ಪ್ರಾರ್ಥನೆ ಪ್ಲೇ ಆಗಿದೆ. ತಕ್ಷಣವೇ ಎಚ್ಚೆತ್ತ ಮಾಜಿ ಸಚಿವ ಈಶ್ವರಪ್ಪ, ಏಯ್ ಇದು ಯಾವ ಪ್ರಾರ್ಥನೆ? ನಾಡಗೀತೆ ಹಾಕಪ್ಪ. ನಿಮ್ಮಲ್ಲಿ ಯಾರಾದರೂ ನಾಡಗೀತೆ ಹಾಡುತ್ತೀರಾ ಎಂದು ನೆರೆದಿದ್ದವರನ್ನು ಈಶ್ವರಪ್ಪ ಕೇಳಿದ್ದಾರೆ. ಬಳಿಕ ಆಯೋಜಕರು ತಮಿಳಿನ ಪ್ರಾರ್ಥನೆಯನ್ನು ನಿಲ್ಲಿಸಿ ಕನ್ನಡದ ನಾಡಗೀತೆಯನ್ನು ಪ್ಲೇ ಮಾಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ