ಎಸ್ಮಾ ಜಾರಿ ಮಾಡಿದ್ರೂ ಹೆದರಲ್ಲ: ಆ.5ರಂದು ಸಾರಿಗೆ ಸೇವೆ ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿ ಮುಷ್ಕರದ ಎಚ್ಚರಿಕೆ

Sampriya

ಬುಧವಾರ, 23 ಜುಲೈ 2025 (19:10 IST)
Photo Credit X
ಬೆಂಗಳೂರು: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ  ಆಗಸ್ಟ್‌ 5 ರಂದು ಸಾರಿಗೆ ನೌಕರರು ರಾಜ್ಯಾದ್ಯಾಂತ ಸಾರಿಗೆ ಸೇವೆ ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ ಎಂದು ಕಾರ್ಮಿಕ ಹೋರಾಟಗಾರ ಡಾ.ಕೆ.ಎಸ್.ಶರ್ಮಾ ತಿಳಿಸಿದರು.

ರಾಜ್ಯ ಸರ್ಕಾರ ಮಾತುಕತೆ ನಡೆಸದಿದ್ದರೆ ಮುಷ್ಕರ ನಡೆಸಲಾಗುವುದು. ಹುಬ್ಬಳ್ಳಿಯಲ್ಲಿ ಸಭೆ ನಡೆಸಿರುವ ಸಾರಿಗೆ ನೌಕರ ಸಂಘವು ರಾಜ್ಯ ಸರ್ಕಾರಕ್ಕೆ ನೋಟಿಸ್ ಮೂಲಕ ಎಚ್ಚರಿಕೆ ನೀಡಿದೆ. ಈ ಮಧ್ಯೆ ಮುಷ್ಕರಕ್ಕೆ ಮುಂದಾಗಿದ್ದ ಸಾರಿಗೆ ನೌಕರರಿಗೆ ಕೆಎಸ್ ಆರ್ ಟಿಸಿ ಶಾಕ್ ನೀಡಿದ್ದು, ಪ್ರತಿಭಟನೆ ನಡೆಸದಂತೆ ಎಸ್ಮಾ ಜಾರಿ ಮಾಡಿದೆ.

ಎಸ್ಮಾ ಕಾಯ್ದೆಗೆ ಸಾರಿಗೆ ನೌಕರರು ಹೆದರುವ ಮಾತಿಲ್ಲ. ಎಸ್ಮಾ ಮೂಲಕವೇ ಆಡಳಿತ ಮಾಡುತ್ತೇವೆ ಎನ್ನುವುದಾದರೆ ಅದೊಂದು ಪ್ರಜಾಪ್ರಭುತ್ವ ಸರ್ಕಾರವಲ್ಲ ಎಂದು ಶರಮ್ಆ ಎಚ್ಚರಿಸಿದರು.

ಸಾರಿಗೆ ನೌಕರರು 19 ತಿಂಗಳಿನಿಂದ ಹಳೆಯ ವೇತನದಲ್ಲಿ ದುಡಿಯುತ್ತಿದ್ದಾರೆ. ಹಿಂದಿನ ವೇತನ ಪರಿಷ್ಕರಣೆಯ 38 ತಿಂಗಳ ವೇತನ ಬಾಕಿ ಕೊಡುವುದಿದೆ. ಆದರೆ ಜನಪರ ಸರಕಾರವಾಗಿದ್ದರೆ ಹಿಂದೆಯೇ ಮಾತುಕತೆ ನಡೆಸಿ ಪರಿಷ್ಕರಣೆ ಮಾಡಬೇಕಿತ್ತು. ಆದರೆ ಸಾರಿಗೆ ನೌಕರರನ್ನು ನಿರ್ಲಕ್ಷಿಸಿಕೊಂಡು ಬಂದಿದೆ. ತಾಳ್ಮೆಗೂ ಒಂದು ಮಿತಿ ಇರುತ್ತದೆ ಎಂದು ಹೇಳಿದರು.

ಸಾರಿಗೆ ಸೇವೆಯು ಅಗತ್ಯ ಸೇವೆಯಾಗಿರುವುದರಿಂದ ಜವಬ್ದಾರಿಯುತ ಸರಕಾರವಾಗಿದ್ದರೆ ವೇತನ ಪರಿಷ್ಕರಣೆ ಮಾಡಬೇಕಿತ್ತು. ಸಾರಿಗೆ ನೌಕರರು ಹೀನಾಯ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಸರಕಾರ ಅರ್ಥ ಮಾಡಿಕೊಳ್ಳುತ್ತಿಲ್ಲ. ಕಾನೂನು ಪ್ರಕಾರ ಸರಕಾರಕ್ಕೆ ನೋಟಿಸ್ ನೀಡಿದ್ದೇವೆ. ನಮ್ಮದೇನು ನಿನ್ನೆ ಮೊನ್ನೆಯ ಸಂಘಟನೆಯಲ್ಲಿ ಈ ಹಿಂದೆ 10 ಕೈಗಾರಿಕ ಒಪ್ಪಂದಗಳನ್ನು ಮಾಡಿದ್ದೇವೆ. ಹಿಂದೆ ಇಂತಹ ಮನಸ್ಥಿತಿಯ ಸರಕಾರವಿರಲಿಲ್ಲ. ಯಾವುದೇ ಬೆದರಿಕೆಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಸಾರಿಗೆ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮಾತುಕತೆ ನಡೆಸಿ ಚರ್ಚೆ ನಡೆಸಬೇಕು. ಇಲ್ಲವಾದಲ್ಲಿ ಆಗಸ್ಟ್ 5ರಿಂದ ರಾಜ್ಯಾದ್ಯಂತ ಒಂದೇ ಒಂದು ಬಸ್ ಕೂಡ ರಸ್ತೆಗೆ ಇಳಿಯಲ್ಲ. ಇದು ಖಚಿತ. ಎಲ್ಲಾ ಸಾರಿಗೆ ನಿಗಮಗಳ ನೌಕರರು ಆಗಸ್ಟ್ 5ರಿಂದ ಅನಿರ್ದಿಷ್ಟಾವದಿ ಮುಷ್ಕರ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ