ತುಮಕೂರು :ಇಂದು ಭಯೋತ್ಪಾದನಾ ವಿರೋಧಿ ಹೋರಾಟ ಹಮ್ಮಿಕೊಂಡಿದ್ದೆವು. ಅದರಲ್ಲಿ ಮುಖ್ಯ ಭಾಷಣಕಾರನಾಗಿ ಮುರುಳಿಕೃಷ್ಣ ಬರೋದಿತ್ತು. ಆದರೆ, ಜಿಲ್ಲಾಡಳಿತ ಮಂಜಾಗ್ರತಾ ಕ್ರಮ ಎಂದು ಅವರನ್ನು ವಶಕ್ಕೆ ಪಡೆದಿದ್ದಾರೆ. ಇವತ್ತು ಬಿಜೆಪಿ ಜಿಲ್ಲಾ ಮುಖಂಡರೆಲ್ಲ ಜಿಲ್ಲಾಧಿಕಾರಿ ಮತ್ತು ಎಸ್ ಪಿ ಅವರನ್ನ ಭೇಟಿ ಮಾಡಿ ಬಿಡುಗಡೆ ಮಾಡುವಂತೆ ತಿಳಿಸಿದ್ದೇವೆ ಎಂದು ಜ್ಯೋತಿಗಣೇಶ್ ಹೇಳಿದರು.
ದಿನಬೆಳಗಾದರೆ ಸರ್ಕಾರದವರು ನೀಡುತ್ತಿರುವ ಕಿರಿಕಿರಿಯಿಂದ ಸಾಕಾಗಿಹೋಗಿದೆ ಎಂದು ಬಿಜೆಪಿ ಶಾಸಕ ಜ್ಯೋತಿ ಗಣೇಶ್ ಮಾಧ್ಯಮಗಳೆದುರು ಅಳಲು ತೋಡಿಕೊಂಡಿದ್ದಾರೆ. ಬುಧವಾರ ತುಮಕೂರಿನಲ್ಲಿ ಕಾಂಗ್ರೆಸ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ ಅವರು, ಕೇಸರಿ ಬಾವುಟ ಕಟ್ಟಬೇಕೆಂದರೆ ರೂಲ್ಸ್ ಮಾತಾಡುತ್ತಾರೆ. ಈ ರೂಲ್ಸ್ ಯಾರಿಗೂ ಇಲ್ಲ ಎಂದು ಕಿಡಿಕಾರಿದರು.
ಮುಂದೆ ಕಾಂಗ್ರೆಸ್ ಪಕ್ಷದವರು ಪಾಕಿಸ್ತಾನಿ ಭಯೋತ್ಪಾದಕರನ್ನೇ ಕರೆತಂದು ಇಲ್ಲಿ ಡಿಜಿ. ಐಜಿಯಾಗಿ ನೇಮಕ ಮಾಡಲಿದ್ದಾರೆ ಎಂದು ಜ್ಯೋತಿಗಣೇಶ್ ಟೀಕಿಸಿದರು.ಸರ್ಕಾರ ಮಾತಾನಾಡುವ ಹಕ್ಕನ್ನ ಹತ್ತಿಕ್ಕುವ ಪ್ರಯತ್ನ ಮಾಡಿದ್ರೆ ನಾವು ಅದಕ್ಕೆ ವಿರುದ್ಧವಾಗಿ ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ ಎಂದು ನುಡಿದ ಜ್ಯೋತಿಗಣೇಶ್, ವಿಧಾನಸೌಧದಲ್ಲಿ ದೇಶದ್ರೊಹಿ ಘೋಷಣೆ ಕೂಗುವರನ್ನ ಬಿಟ್ಟುಕೊಳ್ತಾರೆ. ಆದರೆ ಇಲ್ಲಿ ಆದರೆ ಇಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಟ ಮಾಡೋಕೆ ಬಿಡುವುದಿಲ್ಲ.ಇದು ಪ್ರಜಾಪ್ರಭುತ್ವ ವಿರೋಧಿ ಹಾಗೂ ಮಾತನಾಡುವ ಸ್ವಾತಂತ್ರ್ಯವನ್ನ ಹತ್ತಿಕ್ಕುವ ಧೋರಣೆ ಎಂದು ಕಿಡಿಕಾರಿದರು.