ಪೊಲೀಸರಿಗೂ ಸಿಗದ ಶಂಕಿತನ ಮಾಹಿತಿ -ಡಿಸಿಪಿ ಭೀಮಾಶಂಕರ್ ಗುಳೇದ್

ಸೋಮವಾರ, 21 ನವೆಂಬರ್ 2022 (19:36 IST)
ಬೆಂಗಳೂರಿನ‌ ಕೆಜಿ ಹಳ್ಳಿಯಲ್ಲಿ ಶಂಕಿತನನ್ನ ಪೊಲೀಸರು ವಶಕ್ಕೆ ಪಡೆದಿರುವ ವಿಚಾರವಾಗಿ ಪೂರ್ವ ವಿಭಾಗ ಭೀಮಾಶಂಕರ್ ಗುಳೇದ್ ಪ್ರತಿಕ್ರಿಯಿಸಿದ್ದಾರೆ.
 
ನಿನ್ನೆ ಬೆಳಿಗ್ಗೆ ಮಂಗಳೂರು ಪೊಲೀಸರು ಕರೆ ಮಾಡಿದ್ರು.ಒರ್ವ ಶಂಕಿತ ನಿಮ್ಮ ಭಾಗದಲ್ಲಿ ಇದ್ದಾನೆ ಅಂದ್ರು.ಮೈಸೂರು ಪೊಲೀಸರ ತಂಡ ಕೂಡ ಬರ್ತಾ ಇದೆ ಅಂತೇಳಿದ್ರು.ತಕ್ಷಣವೇ ಕಾರ್ಯಪ್ರವೃತ್ತರಾಗಿ ನಮ್ಮ ಟೀಂ ಮೊಹಮದ್ ರುಹುಲ್ಲಾ ನ ವಶಕ್ಕೆ ಪಡೆದ್ವಿ.ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕಾರ್ಯಕ್ರಮ ಇತ್ತು ಅದಕ್ಕೆ ಬಂದಿದ್ದೇ ಅಂದ.ಮೈಸೂರು ಮೂಲದವನು ಅಂತಾನೂ ಹೇಳಿದ.ನಂತರ ಮೈಸೂರು ಪೊಲೀಸರು ಬಂದ ಬಳಿಕ ಅವರಿಗೆ ಒಪ್ಪಿಸಿದ್ವಿ.ನಂತರ ಅವರು ಮೈಸೂರು ಮನೆ ಸರ್ಚ್ ಮಾಡಬೇಕು ಅಂತ ಕರ್ಕೊಂಡು ಹೋದ್ರು.ಆತನ ಭಾಗಿ ಏನು ಅನ್ನೋದ್ರ ಬಗ್ಗೆ ನಮಗೆ ಮಾಹಿತಿ ಇಲ್ಲ ಅಂತಾ ಡಿಸಿಪಿ ಭೀಮಾಶಂಕರ್ ಗುಳೇದ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ