ಎಲ್ಲರೂ ನನ್ನನ್ನ 2ನೇ ದೇವರಾಜ ಅರಸು ಅಂತಾರೆ : ಸಿದ್ದರಾಮಯ್ಯ

ಮಂಗಳವಾರ, 19 ಸೆಪ್ಟಂಬರ್ 2023 (09:55 IST)
ಬೆಂಗಳೂರು : ನನ್ನನ್ನ ಎಲ್ಲರೂ 2ನೇ ದೇವರಾಜ ಅರಸು ಅಂತಾರೆ. ಆದ್ರೆ ನಾನು ದೇವರಾಜ ಅರಸು ಆಗೋದಕ್ಕೆ ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇವರಾಜ ಅರಸು ಕಾರಿನಲ್ಲಿ ಓಡಾಡಿದಾಕ್ಷಣ ಅರಸು ಆಗೋದಕ್ಕೆ ಸಾಧ್ಯವಿಲ್ಲ ಎಂಬ ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಅವರ ಹೇಳಿಕೆಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

ಬಹಳ ಜನ ನನ್ನನ್ನ ದೇವರಾಜ ಅರಸು ನಂತರ ಸಾಮಾಜಿಕ ಹರಿಕಾರರು ಅಂತಾರೆ, 2ನೇ ದೇವರಾಜ ಅರಸು ಅಂತಾರೆ. ಆದ್ರೆ, ದೇವರಾಜ ಅರಸು ದೇವರಾಜ ಅರಸುನೇ ಸಿದ್ದರಾಮಯ್ಯ ಸಿದ್ದರಾಮಯ್ಯನೇ. ನಾನು ದೇವರಾಜ ಅರಸು ಆಗೋದಕ್ಕೆ ಸಾಧ್ಯವಿಲ್ಲ. ಭಾಷಣದ ಮಾತಿಗಿಂತ ಯಾರಲ್ಲಿ ಬದ್ಧತೆ-ಕಾಳಜಿ ಇದೆ ಎನ್ನುವುದನ್ನು ಅರ್ಥಮಾಡಿಕೊಳ್ಳಿ ಎಂದು ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ