ಇವಿಎಂ ಯಂತ್ರದಲ್ಲಿ ದೋಷ: ಬಿಜೆಪಿ ಅಭ್ಯರ್ಥಿ ಆರೋಪ
ನಗರ ಸ್ಥಳೀಯ ಸಂಸ್ಥೆ ಚುನಾವಣೆ ಮತ ಎಣಿಕೆ ಸಂದರ್ಭದಲ್ಲಿ ಇವಿಎಂ ಯಂತ್ರದಲ್ಲಿ ದೋಷ ಕಂಡುಬಂದಿದೆ ಎಂದು ಬಿಜೆಪಿ ಅಭ್ಯರ್ಥಿಯೊಬ್ಬರು ಆರೋಪಿಸಿದ್ದಾರೆ.
ಚಿತ್ರದುರ್ಗದ ನಗರಸಭಾ ಚುನಾವಣಾ ಮತ ಎಣಿಕೆಯಲ್ಲಿ ಇವಿಎಂ ಯಂತ್ರದಲ್ಲಿ ದೋಷ ಕಂಡುಬಂದಿದೆ ಎಂದು 17ನೇ ವಾರ್ಡನ ಬಿಜೆಪಿ ಅಭ್ಯರ್ಥಿ ಹಬೀಬ್ ಆರೋಪಿಸಿದ್ದಾರೆ. ದೋಷ ಕಂಡುಬಂದಿರುವುದರಿಂದ ಚುನಾವಣಾ ಫಲಿತಾಂಶ ತಡೆ ಹಿಡಿಯುವಂತೆ ಮನವಿ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಗೆಲುವು ಘೋಷಣೆ ವೇಳೆ ಆರ್ ಓ ಮತ್ತು ಬಿಜೆಪಿ ಅಭ್ಯರ್ಥಿ ನಡುವೆ ಮಾತಿನ ಚಕಮಕಿ ಕೂಡ ನಡೆದಿದೆ.
3400 ಮತದಾರಿದ್ದ ವಾರ್ಡನಲ್ಲಿ 2900 ಜನರು ಮತ ಚಲಾಯಿಸಿದ್ದಾರೆ. ಆದರೆ ಮತ ಎಣಿಕೆ ಸಂದರ್ಭದಲ್ಲಿ ಮತದಾನ ನಡೆದ ಸಂಖ್ಯೆಗಿಂತ ಕಡಿಮೆ ಮತ ಕಂಡು ಬಂದಿದೆ ಎಂದು ಆರೋಪ ಮಾಡಲಾಗಿದೆ.