ಬೆಂಗಳೂರು : ನಾವು ಅನೇಕ ಬಾರಿ ತಿಳಿದು ತಿಳಿಯದೆ ಜೀವ-ಜಂತುಗಳ ಸಾವಿಗೆ ಕಾರಣರಾಗಿರುತ್ತೇವೆ. ಗ್ರಂಥಗಳಲ್ಲಿ ಇದನ್ನು ಪಾಪವೆಂದು ಪರಿಗಣಿಸಲಾಗಿದೆ. ಗರುಡ ಪುರಾಣದ ಪ್ರಕಾರ ಜೀವ-ಜಂತುಗಳು ನಮಗೆ ಗೊತ್ತಿಲ್ಲದೆ ಸಾವನ್ನಪ್ಪಿದ್ರೂ ಅದ್ರ ಪಾಪ ನಮಗೆ ತಗುಲಿ ಭವಿಷ್ಯದಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ. ಗರುಡ ಪುರಾಣದಲ್ಲಿ ಇದಕ್ಕೆ ಪ್ರಾಯಶ್ಚಿತದ ವಿಧಾನವನ್ನೂ ಹೇಳಲಾಗಿದೆ.
ಒಣ ಕೊಬ್ಬರಿಯ ಮೇಲಿನ ಸ್ವಲ್ಪ ಭಾಗವನ್ನು ತೆಗೆದು ಒಂದು ರಂಧ್ರ ಮಾಡಿ. ರಂಧ್ರದೊಳಗೆ ಸಕ್ಕರೆಯನ್ನು ತುಂಬಿ. ನಂತ್ರ ನಿರ್ಜನ ಪ್ರದೇಶದಲ್ಲಿ ಈ ಕೊಬ್ಬರಿಯನ್ನು ಮಣ್ಣಿನಲ್ಲಿ ಮುಚ್ಚಿ. ಅರ್ಧ ಭಾಗ ಮಣ್ಣಿನಿಂದ ಮೇಲಿರಲಿ. ಜೀವಿಗಳು ಇದನ್ನು ಸುಲಭವಾಗಿ ತಿನ್ನಲು ಸಾಧ್ಯವಾಗುವಂತೆ ಮಣ್ಣು ಮುಚ್ಚಿ. ಇದ್ರಿಂದ ಜೀವ ಹತ್ಯೆಯ ಪಾಪಕ್ಕೆ ಪ್ರಾಯಶ್ಚಿತ ಸಿಗಲಿದೆ. ಜೊತೆಗೆ ರಾಹು-ಕೇತು ದೋಷ ನಿವಾರಣೆಯಾಗಲಿದೆ.
ಶನಿವಾರ ಬಡ ವ್ಯಕ್ತಿಗಳಿಗೆ ಊಟ ನೀಡಿ. ಇದ್ರಿಂದ ಜೀವ ಹತ್ಯೆಗೆ ಪ್ರಾಯಶ್ಚಿತ ಸಿಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ