ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ಬಂಧನ ಭೀತಿ
ಆದರೆ ಇದೀಗ ವಿಚಾರಣೆಗೆ ಹಾಜರಾಗದ ಬಿಎಸ್ ವೈ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ ಮಾಡಬೇಕೆಂದು ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಆಗ್ರಹಿಸಿದ್ದಾರೆ. ಒಂದು ವೇಳೆ ನ್ಯಾಯಾಲಯ ಇದನ್ನು ಪುರಸ್ಕರಿಸಿದರೆ ಬಿಎಸ್ ಯಡಿಯೂರಪ್ಪರನ್ನು ತನಿಖಾಧಿಕಾರಿಗಳು ತಕ್ಷಣವೇ ಬಂಧಿಸಲಿದ್ದಾರೆ.
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮಹಿಳೆಯೊಬ್ಬರು ಸಹಾಯ ಕೇಳಿಕೊಂಡು ಬಿಎಸ್ ವೈ ಮನೆಗೆ ಹೋಗಿದ್ದಾಗ ನನ್ನ ಅಪ್ರಾಪ್ತ ಮಗಳ ಜೊತೆ ಅವರು ಅನುಚಿತವಾಗಿ ನಡೆದುಕೊಂಡಿದ್ದಾರೆ ಎಂದು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಯಡಿಯೂರಪ್ಪ ವಿರುದ್ಧ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಾಗಿತ್ತು.