ಕುತಂತ್ರ ರಾಜಕಾರಣ ನಡೆಸಿ ರಾಜ್ಯದ ಜನರನ್ನು ವಂಚಿಸಿದ್ದಾರೆ-ಮಾಜಿ ಸಿಎಂ ಕುಮಾರಸ್ವಾಮಿ

ಶುಕ್ರವಾರ, 26 ಮೇ 2023 (21:25 IST)
ಸಾರ್ವತ್ರಿಕ ಚುನಾವಣೆಗೂ ಮುನ್ನ ಕಾಂಗ್ರೆಸ್​​ ನಿನಗೂ, ಫ್ರೀ ನನಗೂ ಫ್ರೀ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೀಗ ಕಂಡಿಷನ್ಸ್ ಹಾಕುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಬೆಂಗಳೂರಿನ ಜೆಡಿಎಸ್​ ಕಚೇರಿಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದರು.ಮೊದಲ ಸಂಪುಟದಲ್ಲೇ ಗ್ಯಾರಂಟಿ ಜಾರಿ ಮಾಡುತ್ತೇವೆ ಎಂದಿದ್ದರು. ಆದರೆ ಈವರೆಗೆ ಜಾರಿ ಮಾಡಿಲ್ಲ. ಅವರು ಕುತಂತ್ರ ರಾಜಕಾರಣ ನಡೆಸಿ ರಾಜ್ಯದ ಜನರನ್ನು ವಂಚಿಸಿದ್ದಾರೆ. ರಾಜ್ಯದ ಜನರು ಯಾರೂ ವಿದ್ಯುತ್ ಬಿಲ್ ಕಟ್ಟಬೇಡಿ​. ಯಾವ ಮಹಿಳೆ ಕೂಡ ಟಿಕೆಟ್​ ಪಡೆಯಬೇಡಿ. ಉಚಿತವಾಗಿ ಸರ್ಕಾರಿ ಬಸ್​ಗಳಲ್ಲಿ ಪ್ರಯಾಣಿಸುವಂತೆ ಹೇಳಿದರು.
ಇನ್ನೂ ಸಂಸತ್ ಭವನದ ಉದ್ಘಾಟನೆ ಗೆ ಮಾಜಿ  ಪ್ರಧಾನಿ ದೇವೇಗೌಡ ಅವರನ್ನ ಆಹ್ವಾನಿಸಿ ದ್ದಾರೆ ಆದರೇ ನಾವು ಬಿಜೆಪಿಯವರ ಬಗ್ಗೆ ಮೃದುದೊರಣೆ ಹೊಂದಿಲ್ಲ ಎಂದು ಸ್ಪಷ್ಟನೆ ನೀಡಿದ್ರು.
 
ರಾಜ್ಯದಲ್ಲಿ ಯಾವ ರೀತಿ ಚುನಾವಣೆಯಲ್ಲಿ ಗೆದ್ದಿದ್ದೀರ ಅನ್ನೋದು ಚೆನ್ನಾಗಿ ಗೊತ್ತಿದೆ 42 ಕ್ಷೇತ್ರದಲ್ಲಿ ಕೂಪನ್ ಗಳನ್ನ ಕೊಟ್ಟಿ ಜನರಿಗೆ ದಿಕ್ಕು ತಪ್ಪಿಸಿ ಗೆದಿದ್ದೀರಾ. ನಾವು ಸೋತರೂ ಜನರ ಪರವಾಗಿ ಬೀದಿಗೀಳಿದು ಹೋರಾಟ ಮಾಡುತ್ತೇವೆ, ಮುಂಬರುವ ಲೋಕಸಭಾ, ಹಾಗೂ ಬಿಬಿಎಂಪಿ ಚುನಾವಣೆ ಗೆ ಪಕ್ಷ ಸಂಘಟನೆ ಮಾಡುತ್ತೇವೆ ಈ ದಿಸೆಯಲ್ಲಿ ಎಲ್ಲಾ ಜಿಲ್ಲಾಧ್ಯಕ್ಷರ ಜತೆ ಸಮಾಲೋಚನೆ ಮಾಡುತ್ತೇವೆ ಎಂದರು ಹಾಗೂ ಜೆಡಿಎಸ್ ಪಕ್ಷ ವಿಸರ್ಜನೆ ಮಾಡಿ ಎಂಬ ಕಾಂಗ್ರೆಸ್ ಟ್ವೀಟ್ ಗೆ , ಪಕ್ಷಕ್ಕೆ ದೇವೆಗೌಡರ ಆರ್ಶಿವಾದ ವಿದೆ .ನಿಮ್ಮಗೆ ರಷ್ಟು ದುರಂಹಕಾರ ಒಳ್ಳೆಯದಲ್ಲ ನಿಮ್ಮ ಪಕ್ಷಕ್ಕೆ ಅಂತ್ಯ ಸಂಸ್ಕಾರ ಮಾಡೋ ಟೈಂ ಬರುತ್ತೆ ಎಂದು ಕಿಡಿಕಾರಿದ್ರು.. ಪಕ್ಷದ ರಾಜ್ಯಧ್ಯಕ್ಷರಾಗಿ ಸಿಎಂ ಇಬ್ರಾಹಿಂ ಹಾಗೂ ಯುವ ಘಟಕದ ಅಧ್ಯಕ್ಷ ರಾಗಿ ನಿಖಿಲ್ ಮುಂದುವರೆತ್ತಾರೆಂದು ಹೇಳಿದ್ರು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ