ಶಾಸಕರ ಭವನದಲ್ಲೇ ಮಾಜಿ ಶಾಸಕನಿಂದ ಪತ್ನಿಗೆ ತಪರಾಕಿ

ಗುರುವಾರ, 23 ಜೂನ್ 2016 (16:09 IST)
ಮಾಜಿ ಶಾಸಕರೊಬ್ಬರು ವಿಧಾನಸೌಧದ ಎದುರಲ್ಲೇ ತನ್ನ ಪತ್ನಿಯ ಮೇಲೆ ಹಲ್ಲೆ ನಡೆಸಿದ ಖಂಡನೀಯ ಕೃತ್ಯ ನಗರದಲ್ಲಿ ನಡೆದಿದೆ. 
 
ಮೂಡಗೆರೆ ಕೇತ್ರದ ಮಾಜಿ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಕಳೆದ 6 ತಿಂಗಳಿಂದ ಮನೆಗೆ ತೆರಳೆದೇ ವಿಧಾನ ಸೌಧದ ಶಾಸಕರ ಭವನದಲ್ಲಿ ವಾಸ್ತವ್ಯ ಹೊಡಿದ್ದರು. ಇಂದು ಅವರ ಪತ್ನಿ ಸವಿತಾ ವಿಧಾನಸೌಧಕ್ಕೆ  ಪತಿಯನ್ನು ಹುಡುಕಿಕೊಂಡು ಬಂದಿದ್ದು, ಪತಿಯನ್ನು ಮನೆಗೆ ಬರುವಂತೆ ಒತ್ತಾಯಿಸಿದ್ದಾಳೆ. 
 
ಪತ್ನಿಯ ಒತ್ತಾಯಕ್ಕೆ ಗರಂ ಆದ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ವಿಧಾನಸೌಧದ ಎದುರಲ್ಲೆ ಪತ್ನಿ ಸವಿತಾ ಅವರ ಮೇಲೆ ಹಲ್ಲೆ ಮಾಡಿದ್ದಾರೆ. 
 
ವಿಧಾನಸೌಧ ಪೊಲೀಸರು ಪತಿ ಮತ್ತು ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ