ರಮೇಶ್ ಕುಮಾರ್ ವಿರುದ್ಧ ಅರಣ್ಯ ಇಲಾಖೆಗೆ ಸೇರಿದ 64 ಎಕರೆ ಗುಳುಂ ಮಾಡಿದ ಆರೋಪ

Krishnaveni K

ಬುಧವಾರ, 30 ಅಕ್ಟೋಬರ್ 2024 (15:00 IST)
ಬೆಂಗಳೂರು: ಮಾಜಿ ಸ್ಪೀಕರ್ ರಮೇಶ್ ಕುಮಾರ ವಿರುದ್ಧ 64 ಎಕರೆ ಅರಣ್ಯ ಭೂಮಿ ಗುಳುಂ ಮಾಡಿದ ಆರೋಪ ಎದುರಾಗಿದೆ. ರಮೇಶ್ ಕುಮಾರ್ ಸೇರಿದಂತೆ ಏಳು ಮಂದಿ ಈ ಭೂಹಗರಣದಲ್ಲಿ ಪಾಲುದಾರರು ಎಂದು ಆರೋಪ ಕೇಳಿಬಂದಿದೆ.

ಕೋಲಾರ ಜಿಲ್ಲೆಯ ಹೊಸುಹುಡ್ಯ ಸರ್ವೆ ನಂ.1, 2 ರಲ್ಲಿರುವ 122 ಎಕರೆ ಅರಣ್ಯ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಏಳು ಮಂದಿಯ ಪೈಕಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕೂಡಾ ಒಬ್ಬರು. ಈ ಮೂಲಕ ರಮೇಶ್ ಕುಮಾರ್ ಗೆ ಸಂಕಷ್ಟ ಎದುರಾಗಿದೆ.

ಈಗಾಗಲೇ ಸರ್ಕಾರ ಮುಡಾ ಹಗರಣ, ವಕ್ಫ್ ಭೂಮಿ ನೋಟಿಸ್ ಸೇರಿದಂತೆ ಹಲವು ವಿವಾದದಲ್ಲಿ ಮುಳುಗಿದೆ. ಅದರ ನಡುವೆ ಈಗ ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ ವಿರುದ್ಧ ಅಕ್ರಮವಾಗಿ ಭೂ ಒತ್ತುವರಿ ಆರೋಪ ಬಂದಿದೆ. ಇದು ರಾಜ್ಯ ಕಾಂಗ್ರೆಸ್ ಗೆ ಮತ್ತೊಂದು ಮುಜುಗರ ತಂದಿಟ್ಟಿದೆ.

ಡಿಕೆ ರವಿ ಡಿಸಿ ಆಗಿದ್ದಾಗ ಜಂಟಿ ಸರ್ವೆ ಮಾಡಲಾಗಿತ್ತು. ಆದರೆ ಇದರಲ್ಲಿ ಗೊಂದಲಗಳಿದ್ದ ಕಾರಣ ಮರು ಸರ್ವೆ ಮಾಡಲು ಕೇಂದ್ರ ಸರ್ಕಾರ ಆದೇಶ ನೀಡಿತ್ತು. ಜೊತೆಗೆ ರಮೇಶ್ ಕುಮಾರ್ ಗೂ ಹಾಜರಿರಲು ಸೂಚಿಸಿತ್ತು.122 ಎಕರೆ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲದ ಕಾರಣ ಇದುವರೆಗೆ ಕ್ರಮ ಜರುಗಿಸಿರಲಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ