ಕೋರ್ಟ್ ನಿರ್ದೇಶನ ಮಾಡಿದ ಅಕ್ರಮ ಕಟ್ಟಡಗಳ ಪಟ್ಟಿಯನ್ನು ನೇರವಾಗಿ ಹೈಕೋರ್ಟ್‍ಗೆ ವಿವರಣೆ

ಶುಕ್ರವಾರ, 4 ಫೆಬ್ರವರಿ 2022 (20:19 IST)
ಕೋರ್ಟ್ ನಿರ್ದೇಶನ ಮಾಡಿದ ಅಕ್ರಮ ಕಟ್ಟಡಗಳ ಪಟ್ಟಿಯನ್ನು ನೇರವಾಗಿ ಹೈಕೋರ್ಟ್‍ಗೆ ವಿವರಣೆ ನೀಡಲಾಗುವುದು ಎಂದು ಬಿಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.
 
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿರುವ ಅಕ್ರಮ ಕಟ್ಟಡಗಳ ಮಾಹಿತಿಯನ್ನು ಹೈಕೋರ್ಟ್ ಕೇಳಿರುವುದರಿಂದ, ಮಾಹಿತಿಯನ್ನು ನೇರವಾಗಿ ಕೋರ್ಟ್‍ಗೆ ಸಲ್ಲಿಕೆ ಮಾಡಲಾಗುವುದು.
ಸಾರ್ವಜನಿಕವಾಗಿ ಬಹಿರಂಗಪಡಿಸುವುದು ಸೂಕ್ತವಲ್ಲ. ಅಕ್ರಮ ಕಟ್ಟಡಗಳ ಮಾಲಕರಿಗೆ ನೋಟಿಸ್ ನೀಡುವಾಗ ಜನಪ್ರತಿನಿಧಿಗಳು ಅದನ್ನು ತಡೆದಿರುವ ಪ್ರಕರಣಗಳು ಪಾಲಿಕೆಯ ಗಮನಕ್ಕೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
 
ಜನರು ಇಂದಿರಾ ಕ್ಯಾಂಟೀನ್ ಬಳಕೆ ಕಡಿಮೆ ಮಾಡುತ್ತಿರುವುದರ ಕುರಿತು ಪರಿಶೀಲನೆ ಮಾಡಿ ಕ್ರಮವನ್ನು ತೆಗೆದುಕೊಳ್ಳಲಾಗುವುದು. ವಾರ್ಡ್‍ನಲ್ಲಿರುವ ಎಲ್ಲಾ ಕ್ಯಾಂಟೀನ್‍ಗಳಿಂದ ಮಾಹಿತಿ ಸಂಗ್ರಹಿಸಲಾಗುವುದು ಎಂದು ಅವರು ಹೇಳಿದರು.
 
ರಾಜ್ಯ ಸರಕಾರದಿಂದ ಬರುವ ಅನುದಾನ ಮತ್ತು ಪಾಲಿಕೆಯ ಆದಾಯವನ್ನು ಪರಿಶೀಲಿಸಿಕೊಂಡು ಬಿಬಿಎಂಪಿ ಬಜೆಟ್ ಅನ್ನು ಮಂಡಿಸಲಾಗುವುದು. ರಾಜ್ಯ ಸರಕಾರವು ಸೂಚಿಸಿದ್ದಲ್ಲಿ, ಹೊಸ ಯೋಜನೆಗಳನ್ನು ಬಜೆಟ್‍ನಲ್ಲಿ ಸೇರಿಸಲಾಗುವುದು ಎಂದ ಅವರು, ಕೋವಿಡ್ ನಿಯಂತ್ರಣ ಕುರಿತು ಮಾತನಾಡಿ, ಒಂದು ವಾರದಲ್ಲೇ ಎಲ್ಲಾ ಅರ್ಹ ಶಾಲಾ ಮಕ್ಕಳಿಗೆ ಕೋವಿಡ್ ಲಸಿಕೆಯನ್ನು ನೀಡಲಾಗುತ್ತದೆ. ಖಾಸಗಿ ಶಾಲೆಗಳಲ್ಲಿ ಕೆಲವು ಗೊಂದಲಗಳಿದ್ದು, ಈಗ ಅದನ್ನು ನಿವಾರಣೆ ಮಾಡಲಾಗಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ