ಬಸ್ ಪಾಸ್ ಇದ್ದವರಿಗೆ ಶುಭ ಸುದ್ದಿ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಪ್ರಯಾಣಿಕರ ಅನುಕೂಲಕ್ಕಾಗಿ ಲಾಕ್ ಡೌನ್ ಪೂರ್ವದಲ್ಲಿ ವಿತರಣೆ ಮಾಡಿರುವ ಮಾಸಿಕ ಪಾಸುಗಳ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.
ಮಾಸಿಕ ಬಸ್ ಪಾಸ್‌ನ್ನು ಹೊಂದಿರುವ ಪ್ರಯಾಣಿಕರು ಹತ್ತಿರದ ಬಸ್ ನಿಲ್ದಾಣದಲ್ಲಿ ನಿಗಮದ ಪಾಸ್ ವಿತರಣಾ ಸಿಬ್ಬಂದಿಗಳಿಂದ ಚಾಲ್ತಿಯ ಬಾಕಿ ಉಳಿದ ದಿನಗಳಿಗೆ(ಚಾಲ್ತಿ ಅವಧಿಯನ್ನು) ವಿಸ್ತರಣಾ ಅವಧಿ ಹಾಗೂ ನಿಗಮದ ಮೊಹರನ್ನು ಪಾಸಿನ ಮೇಲೆ ಹಾಕಿಸಿಕೊಂಡು ಪ್ರಯಾಣಿಸಲು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರಕುಮಾರ್ ತಿಳಿಸಿದ್ದಾರೆ.