ನ್ಯೂಜಿಲೆಂಡ್ : ಕೊರೊನಾ ಅಟ್ಟಹಾಸಕ್ಕೆ ಎಲ್ಲಾ ದೇಶಗಳು ನಲುಗಿಹೋಗಿವೆ. ಆದರೆ ಕೊರೊನಾ ವಿರುದ್ಧ ಹೋರಾಡಿ ಇದೀಗ ನ್ಯೂಜಿಲೆಂಡ್ ಕೊರೊನಾ ಮುಕ್ತವಾದ ಮೊದಲ ದೇಶ ಎಂದೆನಿಸಿಕೊಂಡಿದೆ.
ನ್ಯೂಜಿಲೆಂಡ್ ನಲ್ಲಿ 1,504 ಪ್ರಕರಣಗಳು ಬೆಳಕಿಗೆ ಬಂದಿದ್ದವು. ಅದರಲ್ಲಿ 22 ಮಂದಿ ಸಾವನಪ್ಪಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ನ್ಯೂಜಿಲೆಂಡ್ ಸರ್ಕಾರ ಮಾರ್ಚ್ 19ರಂದೇ ವಿದೇಶಿ ವಿಮಾನಗಳ ಸಂಚಾರ ರದ್ದು ಮಾಡಿ, ಮಾರ್ಚ್ 25ಕ್ಕೆ ಲಾಕ್ ಡೌನ್ ಘೋಷಣೆ ಮಾಡಿತು. ವಿದೇಶದಿಂದ ಬಂದವರನ್ನು ಕಡ್ಡಾಯವಾಗಿ ಹೋಮ್ ಕ್ವಾರಂಟೈನ್ ನಲ್ಲಿಟ್ಟಿತ್ತು.
ಇದರಿಂದಾಗಿ ಕೊರೊನಾ ಸೋಂಕು ಈ ದೇಶದಲ್ಲಿ ಕಡಿಮೆಯಾಗುತ್ತಾ ಹೋಗಿ ನಿನ್ನೆ ಕೊನೆಯ ಕೊರೊನಾ ಸೋಂಕಿತ ಡಿಸ್ಚಾರ್ಚ್ ಮಾಡುವುದರ ಮೂಲಕ ಇದೀಗ ಕೊರೊನಾ ಮುಕ್ತ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.