ಆದಾಯ ತೆರಿಗೆ ಪಾವತಿಗೆ ಜೂನ್ 30ರವರೆಗೆ ವಿಸ್ತರಣೆ- ಸಚಿವೆ ನಿರ್ಮಲಾ ಸೀತಾರಾಮನ್
ಮಂಗಳವಾರ, 24 ಮಾರ್ಚ್ 2020 (14:53 IST)
ಬೆಂಗಳೂರು: ಆದಾಯ ತೆರಿಗೆ ಪಾವತಿಗೆ ಜೂನ್ 30ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
2018-19ನೇ ಸಾಲಿನ ಆದಾಯ ತೆರಿಗೆ ಪಾವತಿಗೆ ಅವಕಾಶ.ಆಧಾರ್ –ಪ್ಯಾನ್ ಕಾರ್ಡ್ ಲಿಂಕ್ ಅವಧಿಯೂ ವಿಸ್ತರಣೆ ಮಾಡಲಾಗಿದೆ. ಜೂನ್ 30, 2020ರವರೆಗೆ ಲಿಂಕಿಂಗ್ ಅವಧಿಯ ವಿಸ್ತರಣೆ ಮಾಡಲಾಗಿದೆ. ತೆರಿಗೆ ಪಾವತಿ ವಿಳಂಬವಾದರೆ ಶೇಕಡಾ 12ರ ಬದಲು 9ರಷ್ಟು ದಂಡ ಹಾಕಲಾಗುತ್ತದೆ.
ಹಾಗೇ ಟಿ.ಡಿಎಸ್ ಜಮಾ ಅವಧಿ ವಿಸ್ತರಣೆ ಇಲ್ಲ, ಬಡ್ಡಿ ಕಡಿಮೆಗೆ ನಿರ್ಧಾರ ಮಾಡಲಾಗಿದೆ.ವಿಳಂಬವಾಗಿ ಟಿಡಿಎಸ್ ಜಮಾ ಮಾಡಿದರೆ ಬಡ್ಡಿ ದರ ಕಡಿತ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ವಿವಾದ್ ಸೇ ವಿಶ್ವಾಸ್ ಜೂನ್ 30,2020ರವರೆಗೆ ವಿಸ್ತರಣೆ ಮಾಡಲಾಗಿದೆ.ತೆರಿಗೆ ಸಂಬಂಧಿತ ಎಲ್ಲಾ ವಿವರ ಸಲ್ಲಿಕೆ ಅವಧಿಯೂ ವಿಸ್ತರಣೆ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.