ಸಿಸಿಬಿ ಪೊಲೀಸ್ರಿಂದ ನಕಲಿ ಮಾರ್ಕ್ ಕಾರ್ಡ್ ಜಾಲ ಪತ್ತೆ ಪ್ರಕರಣ

ಬುಧವಾರ, 14 ಡಿಸೆಂಬರ್ 2022 (20:36 IST)
ಸಿಸಿಬಿ ಪೊಲೀಸ್ರು ಕೆಲವು ದಿನಗಳ ಹಿಂದೆ ಭೇದಿಸಿದ್ದ ನಕಲಿ ಮಾಕ್ಸ್ ಕಾರ್ಡ್ ದಂಧೆ ಆಳ ಅಗಲ ನೀರಿಕ್ಷೆಗೂ ಮೀರಿದೆ. ಸದ್ಯ ಕಿಂಗ್ ಪಿನ್ ನನ್ನ ಬಂಧಿಸಿರೋ ಸಿಸಿಬಿ ಟೀಂ ಎಲ್ಲ ಯೂನಿವರ್ಸಿಟಿಗಳಿಂದ ಮಾಹಿತಿ ಪಡೆಯಲು ವಿವಿ ಗಳಿಗೆ ನೋಟಿಸ್ ನೀಡಿದ್ದಾರೆ.ಸಿಲಿಕಾನ್ ಸಿಟಿಯಲ್ಲಿ ನಿರುದ್ಯೋಗಿ ಯುವಕರನ್ನ ಟಾರ್ಗೆಟ್ ಮಾಡಿ ನಕಲಿ ಸರ್ಟಿಫಿಕೇಟ್ ದಂಧೆ ನಡೆಸ್ತಿದ್ದ ಜಾಲವೊಂದ್ರ ಮೇಲೆ ಕಳೆದ ವಾರ ಹಿಂದೆ ಸಿಸಿಬಿ ಪೊಲೀಸ್ರು ದಾಳಿ ಮಾಡಿ ನಾಲ್ವರು ಆರೋಪಿಗಳನ್ನ ಬಂಧಿಸಿದ್ರು. ಅದ್ರ ಜೊತೆಗೆ ಆರೋಪಿಗಳು ಲಕ್ಷ ಲಕ್ಷಕ್ಕೆ ಮಾರಾಟ ಮಾಡ್ತಿದ್ದ ಸಾವಿರಾರು ನಕಲಿ ದಾಖಲೆಗಳನ್ನ ಸೀಜ್ ಮಾಡಿಕೊಂಡಿದ್ರು. ಆದ್ರೆ, ಈ ನಕಲಿ ದಾಖಲೆಗಳ ದಂಧೆ ನಡೆಸ್ತಿದ್ದ ಪ್ರಮುಖ ಆರೋಪಿ ಶೇಷಾರೆಡ್ಡಿ ನಗರದ ಮಾರತ್ ಹಳ್ಳಿ, ಮಹಾಲಕ್ಷ್ಮಿ ಲೇಔಟ್ ಹಾಗೂ ಕೊಡಿಗೇಹಳ್ಳಿ ವ್ಯಾಪ್ತಿಯಲ್ಲಿ ಸಣ್ಣ ಸಣ್ಣ ಅಂಗಡಿಗಳನ್ನಿಟ್ಟುಕೊಂಡು ಯಾರು  ಇಂತ ದಾಖಲೆ ಬೇಕು ಅಂತಾರೋ ಅಂತಹ ದಾಖಲೆಗಳನ್ನ ಸಿದ್ದಪಡಿಸಿ ಕಲ್ಲರ್ ಪ್ರಿಂಟ್ ತೆಗೆದುಕೊಂಡ್ತಿದ್ದ. ಆ ರೀತಿ ನಡೆಸ್ತಿದ್ದ ದಂಧೆಯಲ್ಲಿ ಪಿಹೆಚ್ ಡಿ ಬಿಟ್ಟು ಉಳಿದೆಲ್ಲಾ ನಕಲಿ ಡಿಗ್ರಿ ಸರ್ಟಿಫಿಕೇಟ್ ಗಳನ್ನ ನಕಲಿ ಮಾಡ್ತಿದ್ರು ಈ ಆರೋಪಿಗಳು.

ಇನ್ನು ದಾಳಿ ವೇಳೆ ನಕಲಿ ಸರ್ಟಿಫಿಕೇಟ್ ದಂಧೆ ನಡೆಸ್ತಿದ್ದ ಪ್ರಮುಖ ಆರೋಪಿಗಳಾದ ಶೇಷಾರೆಡ್ಡಿ ಹಾಗೂ ಆತನ ಸೋದರ ತಲೆಮರೆಸಿಕೊಂಡಿದ್ದ ಬಂಧನಕ್ಕೆ ಬಲೆ ಬೀಸಿದ್ದ ಸಿಸಿಬಿ ಪೊಲೀಸ್ರು ಅನಂತಪುರಂ ನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನ ಬಂಧಿಸಿದ್ದಾರೆ . ಆರೋಪಿಗಳ ಬಂಧನದಿಂದ ಈ ಹಗರಣದಲ್ಲಿ ಬಂಧಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಇನ್ನು ಬಂಧಿತ ಆರೋಪಿಗಳನ್ನ ಹೆಚ್ಚಿನ ವಿಚಾರಣೆಗೊಳಪಡಿಸಿರೋ ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿರುವ ಸರ್ಟಿಫಿಕೇಟ್ ಗಳಲ್ಲಿ ಯಾವುದು ನಕಲಿ ಯಾವುದು ಅಸಲಿ ಅಂತ ತನಿಖೆ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಯುಜಿಸಿ ಮೊರೆ ಹೋಗಿದ್ದಾರೆ. ಜೊತೆಗೆ ಆಯಾ ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ನೊಟೀಸ್ ನೀಡಿ ಮಾಹಿತಿ ಕಲೆ ಹಾಕ್ತಿದ್ದಾರೆ.

ಡಿಜಿಟಲ್ ಎವಿಡೆನ್ಸ್ ಕಲೆಹಾಕುವಂತ ಕೆಲಸ ಮಾಡ್ತಿರೋ ಸಿಸಿಬಿ ಪೊಲೀಸ್ರು ತನಿಖೆಗಾಗಿ ವಿಶೇಷ ತಂಡಗಳನ್ನ ರಚಿಸಿದ್ದಾರೆ. ಆರೋಪಿಗಳಿಂದ ನಕಲಿ ದಾಖಲೆಗಳನ್ನ ಪಡೆದು ಸರ್ಕಾರಿ ಕೆಲ್ಸದಲ್ಲಿ ಯಾರಾದ್ರೂ ಇರಬಹುದು ಅನ್ನೋ ಅನುಮಾನದ ಮೇರೆಗೆ ಹುಡುಕಾಟ ಮುಂದುವರೆಸಿದ್ದಾರೆ. ಇನ್ನು ಆರೋಪಿಗಳೊಂದಿಗೆ ಯಾವ ಯಾವ ಯೂನಿವರ್ಸಿಟಿಯ ಅಧಿಕಾರಿಗಳು ಶಾಮೀಲಾಗಿದ್ದಾರೆ ಅನ್ನೋದನ್ನ ಪತ್ತೆಯಚ್ಚಲು ತನಿಖೆ ಮುಂದುವರೆಸಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ