ಗರ್ಭಪಾತ ಆಗಲು ಮಾತ್ರೆ‌‌‌‌ ನುಂಗಿದ ಪರಿಣಾಮ ಗೃಹಿಣಿ ಪ್ರಾಣಕ್ಕೆ ಕುತ್ತು..!

ಬುಧವಾರ, 14 ಡಿಸೆಂಬರ್ 2022 (18:52 IST)
ಗರ್ಭಪಾತ ಆಗಲು ಮಾತ್ರೆ‌‌‌‌ ನುಂಗಿದ ಪರಿಣಾಮ ಗೃಹಿಣಿ ತನ್ನ‌ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಾಳೆ. ಅಬಾರ್ಶನ್ ಮಾತ್ರೆ ಸೇವಿಸಿ ಉಂಟಾದ‌ ಬ್ಲಿಡಿಂಗ್ ನಿಂದ ಸಾವನ್ನಪ್ಪಿದ್ದಾಳೆ.
ಬೇಗೂರು ಠಾಣಾ ವ್ಯಾಪ್ತಿಯ ನ್ಯೂ ಮೈಕೋ ಲೇಔಟ್ ನಲ್ಲಿ ವಾಸವಾಗಿದ್ದ ಪ್ರೀತಿ ಕುಶ್ವಾಸ್ ಸಾವನ್ನಪ್ಪಿದ ದುದೈರ್ವಿ. 2016 ರಲ್ಲಿ ದೇವಬ್ರತ್ ಜೊತೆ ಮದುವೆ ಪ್ರೀತಿಯ ವಿವಾಹವಾಗಿತ್ತು‌. ಖಾಸಗಿ ಕಂಪೆನಿಯಲ್ಲಿ ಗಂಡ ಕೆಲಸ ಮಾಡುತ್ತಿದ್ದರೆ ಹೆಂಡತಿ ಗೃಹಿಣಿಯಾಗಿದ್ದಳು. ದಂಪತಿಗೆ 11 ತಿಂಗಳ ಗಂಡು ಮಗುವಿದೆ.‌‌ ಈ ನಡುವೆ ಪ್ರೀತಿ ಗರ್ಭ ಧರಿಸಿದ್ದಾಳೆ.‌‌ ನಮಗೆ 11 ತಿಂಗಳ ಗಂಡು ಮಗುವಿದ್ದು ಈಗಲೇ ಮಗುಬೇಡ ಎಂದು ಹೇಳಿ ಅಬಾರ್ಶನ್ ಮಾತ್ರೆ ಸೇವಿಸುವುದಾಗಿ ಹೇಳಿದ್ದಳು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮಾತ್ರೆ ಬೇಡ.ಆಸ್ಪತ್ರೆಗೆ ಹೋಗೋಣ ಪತಿ ದೇವಬ್ರತ್ ಹೇಳಿದ್ದ. ಈ‌ ನಡುವೆ ಗಂಡನಿಗೆ ತಿಳಿಸದೆ ಮಾತ್ರೆ‌ ನುಂಗಿದ್ದಾಳೆ. ಸೈಡ್ ಎಫೆಕ್ಟ್ ಆಗಿ ಬ್ಲಿಡಿಂಗ್ ಆಗಿದ್ದು ಅರೆ ಪ್ರಜ್ಞಾವ್ಯವಸ್ಥೆಗೆ ತಲುಪಿಸಿದ್ದಾಳೆ. ಕೂಡಲೇ ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಪ್ರಾಣ ಕಳೆದುಕೊಂಡಿದ್ದಾಳೆ. ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ‌‌ ಅಸಹಜ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ