ಕೊನೆಗೂ ಪ್ರತಿಭಟನೆ ಸಿಲ್ಲಿಸಿ ಮನೆಯತ್ತ ಮುಖ ಮಾಡಿದ ರೈತ ಹೋರಾಟಗಾರರು

ಭಾನುವಾರ, 12 ಡಿಸೆಂಬರ್ 2021 (18:54 IST)
ದೆಹಲಿಯ ಸಿಂಘು, ಗಾಜಿಪುರ ಮತ್ತು ಟಿಕ್ರಿಯಲ್ಲಿ ಸತತ 15 ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದ ರೈತರು ಇಂದು ಮನೆಗೆ ಹಿಂತಿರುಗುತ್ತಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಒತ್ತಾಯಿಸಿ ಸುದೀರ್ಘ ಪ್ರತಿಭಟನೆ ನಡೆಸಿದ್ದಾರೆ. ಇಂದು ಈ ಎಲ್ಲಾ ರೈತರು ಟ್ರ್ಯಾಕ್ಟರ್ ಹಾಗೂ ಮೆರವಣಿಗೆ ಮೂಲಕ ತಮ್ಮ ಗ್ರಾಮಗಳಿಗೆ ತೆರಳುತ್ತಿದ್ದಾರೆ. ಗಡಿಗಳಲ್ಲಿ ನೆಲಯೂರಿದ್ದ ಟೆಂಟ್ ಗಳನ್ನು ರೈತರು ತೆಗೆದು ಹಾಕುತ್ತಿರುವ ದೃಶ್ಯ ಎಲ್ಲೆಡೆ ಕಂಡು ಬಂದಿದೆ.
ಈ ವೇಳೆ ಹರಿಯಾಣ, ಪಂಜಾಬ್ ಹಾಗೂ ಉತ್ತರ ಪ್ರದೇಶದ ರೈತರು ಅಲಂಕೃತ ಟ್ರ್ಯಾಕ್ಟರ್ ಗಳ ಮೂಲಕ ನೃತ್ಯ, ಹಾಡು ಹಾಡುತ್ತ ನಮ್ಮ ಮನೆಗಳಿಗೆ ಹಿಂತಿರುಗುತ್ತಿದ್ದಾರೆ. ಕೇವಲ ಕೃಷಿ ಕಾಯ್ದೆ ಮಾತ್ರವಲ್ಲದೆ ಬೆಳೆಗಳ ಬೆಂಬಲ ಬೆಲೆಯನ್ನು ಕಾನೂನಾತ್ಮಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ