ರೈತರೇನು ದರೋಡೆಕೋರರಲ್ಲ, ಕೊಲೆಗಡುಕರು ಅಲ್ಲ: ಶಾಸಕ ನಡಹಳ್ಳಿ ಆಕ್ರೋಶ

ಶನಿವಾರ, 6 ಆಗಸ್ಟ್ 2016 (17:19 IST)
ಮಹದಾಯಿ ಹೋರಾಟದಲ್ಲಿ ಪೊಲೀಸರಿಂದ ಅಮಾಯಕರ ಮೇಲೆ ದೌರ್ಜನ್ಯ ಹಾಗೂ ಹೋರಾಟಗಾರರ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಮಾನವ ಹಕ್ಕುಗಳ ಆಯೋಗ ಮತ್ತು ಪೊಲೀಸ್ ದೂರು ಪ್ರಾಧಿಕಾರ ಎರಡು ಸತ್ತು ಹೋಗಿವೆ ಎಂದು ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಹೋರಾಟದಲ್ಲಿ ಬಂಧನಕ್ಕೊಳಗಾಗಿ ಬಳ್ಳಾರಿ ಕಾರಾಗೃಹದಲ್ಲಿರುವ ರೈತರನ್ನು ಭೇಟಿಯಾಗಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರೇನು ದರೋಡೆಕೋರರಲ್ಲ, ಕೊಲೆಗಡುಕರು ಅಲ್ಲ ಅವರನ್ನು ಬಂಧಿಸಿ ದನಕ್ಕೆ ಬಾರಿಸಿದ ಹಾಗೆ ಬಾರಿಸಿರುವುದು ಖಂಡನೀಯ ಎಂದು ತಿಳಿಸಿದರು.
 
ಈ ಕೂಡಲೇ ರೈತರಿಗೆ ಎಂಎಲ್‌ಸಿ ಮಾಡಿಸಿ ಅವರನ್ನು ಕಾರಾಗೃಹದಿಂದ ಬಿಡುಗಡೆಗೊಳಿಸಬೇಕು ಎಂದು ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಆಗ್ರಹಿಸಿದ್ದಾರೆ. 
 
ಮಹದಾಯಿ ನ್ಯಾಯಾಧೀಕರಣ ನೀಡಿದ ತೀರ್ಪು ವಿರೋಧಿಸಿ ರೈತರು ಧರಣಿ ನಡೆಸಿದ್ದರು. ಈ ವೇಳೆ ಪೊಲೀಸರು ಧರಣಿನಿರತ ರೈತರು ಹಾಗೂ ಯಮನೂರ ಗ್ರಾಮಸ್ಥರ ಮೇಲೆ ಲಾಠಿ ಬೀಸುವ ಮೂಲಕ ದೌರ್ಜನ್ಯ ಮೆರೆದಿದ್ದು, ಧರಣಿ ನಿರತರನ್ನು ಹಾಗೂ ಅಮಾಯಕರನ್ನು ಬಂಧಿಸಿ ಬಳ್ಳಾರಿ ಕಾರಾಗೃಹಕ್ಕೆ ಕಳುಹಿಸಿದ್ದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ