ಬೆಂಗಳೂರು: ಕೇವಲ ವಿಜಯಪುರ ಮಾತ್ರವಲ್ಲ, ಈಗ ನಾಲ್ಕು ಜಿಲ್ಲೆಯ ರೈತರಿಗೆ ವಕ್ಫ್ ಭೀತಿ ಎದುರಾಗಿದ್ದು, ರೈತರು ತಮ್ಮ ಜಮೀನಿನ ಪಹಣಿ ಪರಿಶೀಲನೆಗಾಗಿ ತಹಶೀಲ್ದಾರ್ ಕಚೇರಿ ಎದುರು ಕ್ಯೂ ನಿಂತಿದ್ದಾರೆ.
ಇನ್ನಷ್ಟು ಕೂಲಂಕುಷವಾಗಿ ನೋಡಿದಾಗ ಕೇವಲ ವಿಜಯಪುರ, ಧಾರವಾಡ ಮಾತ್ರವಲ್ಲ, ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ವಕ್ಫ್ ಆಸ್ತಿ ಭಯ ಶುರುವಾಗಿದೆ. ವಿಜಯಪುರ, ಧಾರವಾಡ ಮಾತ್ರವಲ್ಲದೆ ಕಲಬುರಗಿ, ಬೀದರ್, ಬಾಗಲಕೋಟೆಯಲ್ಲೂ ವಕ್ಫ್ ಆಸ್ತಿ ಎಂದು ನಮೂದಾಗಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.
ಈ ಹಿನ್ನಲೆಯಲ್ಲಿ ಈ ಜಿಲ್ಲೆಯ ರೈತರು ತಮ್ಮ ಜಮೀನು ಪಹಣಿ ಪರಿಶೀಲನೆಗಾಗಿ ನೋಂದಣಿ ಕಚೇರಿ, ತಹಶೀಲ್ದಾರ್ ಕಚೇರಿ ಮುಂದೆ ಕ್ಯೂ ನಿಂತಿದ್ದಾರೆ. ತಮ್ಮ ಜಮೀನೂ ವಕ್ಫ್ ಆಸ್ತಿ ಎಂದು ನಮೂದಾಗಿದೆಯೇ ಎಂದು ಪರೀಲನೆ ಮಾಡಲು ಮುಂದಾಗಿದ್ದಾರೆ. ವಿಜಯಪುರದಲ್ಲಿ 124 ಕ್ಕೂ ಹೆಚ್ಚು ರೈತರ ಆಸ್ತಿ ವಕ್ಫ್ ಆಸ್ತಿ ಎಂದು ನಮೂದಾಗಿರುವ ಸುದ್ದಿ ಬೆನ್ನಲ್ಲೇ ಇತರೆ ಜಿಲ್ಲೆಗಳಲ್ಲೂ ಆತಂಕ ಮನೆ ಮಾಡಿದೆ.