ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರೋಧಿಸಿ 6ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ

ಶನಿವಾರ, 26 ಸೆಪ್ಟಂಬರ್ 2020 (10:32 IST)
ಬೆಂಗಳೂರು : ಎಪಿಎಂಸಿ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರೋಧಿಸಿ ಸರ್ಕಾರದ ವಿರುದ್ಧ ರೈತರ ಅಹೋರಾತ್ರಿ ಧರಣಿ ಮುಂದುವರಿದಿದೆ.

3 ಕಾಯ್ದೆ ವಿರೋಧಿಸಿ ರೈತರಿಂದ ನಡೆಸುತ್ತಿದ್ದು, ಈ ಧರಣಿ ಇಂದು 6ನೇ ದಿನಕ್ಕೆ ಕಾಲಿಟ್ಟಿದೆ. ನಿನ್ನೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ರೈತರ ಜೊತೆ ಸಂಧಾನದ ಮಾತುಕತೆ ನಡೆಸಿದ್ದರು ಅದು ವಿಫಲವಾಗಿದೆ. ಹಿನ್ನಲೆಯಲ್ಲಿ ಫ್ರೀಡಂಪಾರ್ಕ್ , ಮೌರ್ಯ ಸರ್ಕಲ್ ನಲ್ಲಿ ರೈತರು ಪ್ರತಿಭಟನೆ ಮುಂದುವರಿಸುತ್ತಾ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.

ಹಾಗೇ ಸೆಪ್ಟೆಂಬರ್ 28ರ ಸೋಮವಾರದಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದು, ಇದಕ್ಕೆ ಹಲವು ಸಂಘಟನೆಗಳು ಸಹಕಾರ ನೀಡಿವೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ