ಅವಧಿ ಮುಗಿದ ಟೀ ಪುಡಿ ಖರೀದಿಸುವಂತೆ ರೈತರಿಗೆ ಅಧಿಕಾರಿಗಳಿಂದ ಒತ್ತಡ!
ಶನಿವಾರ, 18 ಜನವರಿ 2020 (07:18 IST)
ರಾಯಚೂರು : ರಾಯಚೂರಿನ ತೊಗರಿ ಖರೀದಿ ಕೇಂದ್ರದಲ್ಲಿ ರೈತರಿಗೆ ಹೆಸರು ನೊಂದಾಣಿ ಮಾಡಿಕೊಳ್ಳಲು ಅವಧಿ ಮುಗಿದ ಟೀ ಪುಡಿ ಖರೀದಿಸುವಂತೆ ಅಧಿಕಾರಿಗಳು ಷರತ್ತು ವಿಧಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ರೈತರ ಹೋರಾಟದ ಬಳಿಕ ಸರ್ಕಾರ ಗುರುವಾರದಿಂದ ತೊಗರಿ ಖರೀದಿ ಕೇಂದ್ರಗಳನ್ನು ಆರಂಭಿಸಿ ರೈತರು ಹೆಸರು ನೋಂದಾಯಿಸುವಂತೆ ಸೂಚಿಸಿತ್ತು. ಆದರೆ ರಾಯಚೂರಿನ ತೊಗರಿ ಖರೀದಿ ಕೇಂದ್ರದಲ್ಲಿ ರೈತರಿಗೆ ಹೆಸರು ನೊಂದಾಣಿ ಮಾಡಿಕೊಳ್ಳಲು ಪಹಣಿ ಜೊತೆಗೆ ಅವಧಿ ಮುಗಿದ ಟೀ ಪುಡಿ ಖರೀದಿಸುವಂತೆ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.
ನಫೆಡ್ ಕಂಪೆನಿಯ ಟೀ ಪುಡಿ ಪ್ಯಾಕೇಟ್ ಇದಾಗಿದ್ದು ಅದರ ಅವಧಿ ನವೆಂಬರ್ 2019ಕ್ಕೆ ಮುಗಿದಿತ್ತು. ಆದರೂ ರೈತರು ಹೆಸರು ನೊಂದಾಯಿಸಲು ಅನಿವಾರ್ಯವಾಗಿ ಖರೀದಿಸುತ್ತಾ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.