ರೈತರಿಗೆ ಶಾಕಿಂಗ್ ನ್ಯೂಸ್ : ಖರೀದಿ ಪ್ರಕ್ರಿಯೆ ಬಂದ್

ಬುಧವಾರ, 8 ಜನವರಿ 2020 (16:32 IST)
ರೈತರಿಗೆ, ಬೆಳೆಗಾರರಿಗೆ ಕಹಿ ಸುದ್ದಿಯೊಂದು ಬಂದಿದೆ.

2019-20ನೇ ಸಾಲಿಗೆ ಭಾರತೀಯ ಹತ್ತಿ ನಿಗಮದ ವತಿಯಿಂದ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಧಾರವಾಡದ ಬೇಲೂರಿನ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿಸಲಾಗಿರುವ ಹತ್ತಿ ಖರೀದಿ ಕೇಂದ್ರದಲ್ಲಿ ಖರೀದಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ. ಜ. 09 ರಿಂದ ಜ. 10 ರವರೆಗೆ ಹತ್ತಿ ಖರೀದಿಯನ್ನು ಸ್ಥಗಿತಗೊಳಿಸಲಾಗಿದೆ. ಜ.11 ರಿಂದ ಖರೀದಿ ಪ್ರಕ್ರಿಯೆ ಪುನಃ ಆರಂಭಿಸಲಾಗುತ್ತದೆ.

ಕೈಗಾರಿಕಾ ಪ್ರದೇಶದಲ್ಲಿನ ಜಿನ್ನಿಂಗ್ ಪ್ಯಾಕ್ಟರಿಗಳ ಯಂತ್ರಗಳು ದುರಸ್ತಿಯಲ್ಲಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ದಿನಕ್ಕೆ ಹತ್ತಿ ತೆಗೆದುಕೊಂಡು ಬರುವ 50 ಜನ ರೈತರಿಗೆ ಮಾತ್ರ ಚೀಟಿ ನೀಡಿ ಸೀಜನ್ ಮುಗಿಯುವರೆಗೆ ಹತ್ತಿಯನ್ನು ಖರೀದಿಸಲಾಗುತ್ತದೆ.

ರೈತರು ಆತಂಕ ಪಡುವ ಅವಶ್ಯಕತೆ ಇಲ್ಲ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 8618521546, 9343101108 ಅಥವಾ ಧಾರವಾಡ ಎಪಿಎಂಸಿ ಕಛೇರಿಯನ್ನು ಸಂಪರ್ಕಿಸಬಹುದು. ಹೀಗಂತ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ತಿಳಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ