ರೈತರು ಸತ್ತ ಮೇಲೆ ಪರಿಹಾರ ಕೊಡ್ತಾರಾ!

ಭಾನುವಾರ, 18 ಅಕ್ಟೋಬರ್ 2020 (19:24 IST)
ಬಿಜೆಪಿ ನೇತೃತ್ವದ ರಾಜ್ಯ ಸರಕಾರದ ವಿರುದ್ಧ ಕಾಂಗ್ರೆಸ್ ಟೀಕಾಸ್ತ್ರ ಮುಂದುವರಿಸಿದೆ.

ರಾಜ್ಯದಲ್ಲಿ ಸರಕಾರ ಇದೆಯಾ? ಇದ್ದರೆ ಎಲ್ಲವನ್ನೂ ಮಳೆಯಲ್ಲಿ ಕಳೆದುಕೊಂಡಿರುವ ರೈತರಿಗೆ ಪರಿಹಾರ ಯಾವಾಗ ಬಿಡುಗಡೆ ಮಾಡುತ್ತಾರೆ? ರೈತರು ಸತ್ತ ಮೇಲೆ ಪರಿಹಾರ ಕೊಡುತ್ತಾರಾ ಎಂದೆಲ್ಲ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಪ್ರಶ್ನೆ ಮಾಡಿದ್ದಾರೆ.

ರಾಜ್ಯದಲ್ಲಿ ಪ್ರವಾಹ ಬಂದು ಜನರು ತೊಂದರೆ ಅನುಭವಿಸುತ್ತಿದ್ದರೆ ಬೈ ಎಲೆಕ್ಷನ್ ನಲ್ಲಿ ಎಲ್ಲರೂ ಓಡಾಡುತ್ತಿದ್ದಾರೆ. ಕಣ್ಣು, ಕಿವಿ, ಹೃದಯ ಇಲ್ಲದ ಸರಕಾರ ಇದಾಗಿದೆ ಎಂದು ಖಂಡ್ರೆ ದೂರಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ