ಟೊಮೊಟೊವನ್ನ ಚರಂಡಿಗೆ ಎಸೆದ ರೈತರು..!

ಬುಧವಾರ, 10 ಆಗಸ್ಟ್ 2022 (14:41 IST)
ಟೊಮೊಟೊ ಬೆಲೆ ತೀವ್ರ ಕುಸಿತ ಕಂಡಿರುವುದರಿಂದ ಬೆಳೆಗಾರರು ನೂರಾರು ಕೆಜಿ ಟೊಮೆಟೊವನ್ನು ರಸ್ತೆ ಬದಿ, ಮಾರುಕಟ್ಟೆಯಲ್ಲಿ ಸುರಿದು ಹೋಗುತ್ತಿದ್ದಾರೆ.

ಒಂದು ತಿಂಗಳಿನಿಂದ ತಾಲ್ಲೂಕಿನಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಕಾರಣ ಹಾಗೂ ಈ ಬಾರಿ ಟೊಮೆಟೊ ಭಾರಿ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿರುವುದರಿಂದ ಬೇಡಿಕೆ ಕುಸಿದಿದೆ.ಬೇಡಿಕೆ ಇಲ್ಲದಿರುವುದರಿಂದ ವ್ಯಾಪಾರಿಗಳು, ಮಧ್ಯವರ್ತಿಗಳು ಕಡಿಮೆ ಬೆಲೆಗೆ ಟೊಮೆಟೊ ಕೇಳುತ್ತಿದ್ದಾರೆ. ಹಾಕಿದ ಬಂಡವಾಳವೂ ಕೈಸೇರದ ಕೋಪದಲ್ಲಿ ಟೊಮೆಟೊವನ್ನು ರಸ್ತೆ ಬದಿ, ಎಪಿಎಂಸಿ ಆವರಣದಲ್ಲೇ ಸುರಿದು ಹೋಗುತ್ತಿದ್ದಾರೆ.ಕೇಳುವ ಬೆಲೆಗೆ ಮಾರಿದರೂ ಕಮಿಷನ್ ಹಾಗೂ ವಾಹನದ ಬಾಡಿಗೆಗೆ ಆಗುವುದಿಲ್ಲ ಆದ್ದರಿಂದ ದನಕರುಗಳಾದರೂ ತಿನ್ನಲಿ ಎಂದು ರೈತರು ಹೇಳುತ್ತಿದ್ದಾರೆ.ಆಟೋ ಬಾಡಿಗೆಯೂ ಬರುತ್ತಿಲ್ಲ: ಮಾರುಕಟ್ಟೆಗೆ ದೂರದ ಊರುಗಳಿಂದ ಹಲವು ರೈತರು ಆಟೊವನ್ನು ಬಾಡಿಗೆ ಮಾಡಿಕೊಂಡು ಟೊಮೆಟೊ ತರುತ್ತಿದ್ದಾರೆ. ಬೆಲೆ ಇಲ್ಲದಿರುವುದರಿಂದ ಆಟೊ ಬಾಡಿಗೆಯಷ್ಟು ಹಣವೂ ಸಿಗುತ್ತಿಲ್ಲ. ರೈತರು ಜೇಬಿನಿಂದಲೇ ಬಾಡಿಗೆ ಕೊಡುವಂತಾಗಿದೆ ಎಂದು ಮಾರುಕಟ್ಟೆಯಲ್ಲಿ ಸುರಿದು ಹೋಗುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ