ಭೀಕರ ಅಪಘಾತ: ಒಂದೇ ಕುಟುಂಬದ ಮೂವರ ದಾರುಣ ಸಾವು

ಬುಧವಾರ, 13 ಮಾರ್ಚ್ 2019 (12:31 IST)
ಸಾರಿಗೆ ಇಲಾಖೆಯ ಬಸ್ ಹಾಗೂ ಮಾರುತಿ ಕಾರಿನ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದೆ.

ಹಾಸನ- ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಭೀಕರ ಅಪಘಾತ ಸಂಭವಿಸಿದೆ. ಸಾರಿಗೆ ಬಸ್ ಹಾಗೂ ಮಾರುತಿ ಕಾರಿನ ‌ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ.

ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಲಕ್ಷ್ಮಿದೇವರಹಳ್ಳಿ ಬಳಿ ಘಟನೆ ನಡೆದಿದೆ. ಒಂದೇ ಕುಟುಂಬದ ಮುಝೀಬಾ(53), ಮೊಹಮ್ಮದ್ ಸಾಧಿಕ್( 22), ಮುಷ್ಕಾನ್(19) ಮೃತರಾಗಿದ್ದಾರೆ. ಮೃತರೆಲ್ಲರೂ ಶಿವಮೊಗ್ಗ ಜಿಲ್ಲೆ ರಾಗಿಗುಡ್ಡೆ ಗ್ರಾಮದವರಾಗಿದ್ದಾರೆ.

ಮಧುಗಿರಿಯ ತನ್ನ ತಾಯಿ ಮನೆಗೆ ಕುಟುಂಬ ಸಮೇತ ತೆರಳಿದ್ದ ಮುಝೀಬಾ ಕುಟುಂಬದವರು ವಾಪಸ್ ಮರಳುವಾಗ ಮದ್ಯರಾತ್ರಿ 1-30 ರ ಸುಮಾರಿಗೆ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.  ಗಾಯಾಳುಗಳನ್ನು ಶಿವಮೊಗ್ಗ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ