ಅನ್ಯ ಜಾತಿಯವನನ್ನು ಮದುವೆಯಾಗಿದ್ದಕ್ಕೆ ಮಗಳನ್ನೇ ಸುಟ್ಟು ಹಾಕಿದ ತಂದೆ

Krishnaveni K

ಶನಿವಾರ, 30 ಆಗಸ್ಟ್ 2025 (09:38 IST)
ಕಲಬುರಗಿ: ಅನ್ಯ ಜಾತಿಯವನನ್ನು ಮದುವೆಯಾಗಿದ್ದಕ್ಕೆ ಮಗಳನ್ನೇ ತಂದೆ ಸುಟ್ಟು ಹಾಕಿದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಇದರೊಂದಿಗೆ ಮತ್ತೆ ಮರ್ಯಾದಾ ಹತ್ಯೆ ಸದ್ದು ಮಾಡಿದೆ.

ಕಲಬುರಗಿ ತಾಲೂಕಿನ ಮೇಳಕುಂದಾ ಗ್ರಾಮದಲ್ಲಿ ಘಟನೆ ನಡೆದಿದೆ. 18 ವರ್ಷದ ಮಗಳನ್ನು ತಂದೆಯೇ ಕೊಲೆ ಮಾಡಿದ್ದಾರೆ. ಕವಿತಾ ಎಂಬ ಹೆಣ್ಣು ಮಗಳು ಕೊಲೆಯಾಗಿದ್ದು ಆಕೆಯ ತಂದೆ ಶಂಕರ್ ಕೊಳ್ಳುರು ಆರೋಪಿ.

ಈತನಿಗೆ ಕೊಲೆಗೆ ಸಾಥ್ ನೀಡಿದ್ದ ಶರಣು ಮತ್ತು ದತ್ತಪ್ಪ ಎಂಬವರನ್ನೂ ಬಂಧಿಸಲಾಗಿದೆ. ಲಿಂಗಾಯತ ಸಮುದಾಯದವರಾಗಿದ್ದ ಕವಿತಾ ಕುರುಬ ಸಮುದಾಯದ ಮಾಳಪ್ಪ ಪೂಜಾರಿಯನ್ನು ಪ್ರೀತಿಸುತ್ತಿದ್ದಳು. ನಾಲ್ಕು ತಿಂಗಳ ಹಿಂದೆ ಮನೆಯವರಿಗೆ ಮಗಳ ಪ್ರೀತಿ ವಿಚಾರ ಗೊತ್ತಾಗಿತ್ತು.

ಬಳಿಕ ಮಗಳನ್ನು ಹೆದರಿಸಿ, ಬೆದರಿಸಿ ಆತನ ಸಹವಾಸ ಬಿಡುವಂತೆ ಹೇಳಿದ್ದಾರೆ. ಆದರೆ ಆಕೆ ಇದಕ್ಕೆ ಕಿವಿಗೊಡದೇ ತನ್ನ ಸಂಬಂಧ ಮುಂದುವರಿಸಿದ್ದಳು. ಇದರಿಂದ ಸಿಟ್ಟಿಗೆದ್ದ ತಂದೆ ತನ್ನ ಸಂಬಂಧಿಕರ ಸಹಾಯದಿಂದ ಮಗಳ ಕತ್ತು ಹಿಸುಕಿ ಕೊಲೆ ಮಾಡಿದ್ದ ವಿಷ ಸೇವಿಸಿ ಆತ್ಮಹತ್ಯೆ ಮಾಡಿದ್ದಾಳೆಂದು ಬಿಂಬಿಸಿ ತಾನೇ ಮೃತದೇಹವನ್ನು ಸುಟ್ಟು ಹಾಕಿದ್ದ. ಆದರೆ ಪೊಲೀಸರ ತನಿಖೆ ವೇಳೆ ಸತ್ಯ ಬಯಲಾಗಿದೆ. ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ