ತೋಟದ ಕೆಲಸ ಮಾಡುವಂತೆ ತಂದೆ ಒತ್ತಡ! ಮುಂದೇನಾಯ್ತು?

ಬುಧವಾರ, 19 ಅಕ್ಟೋಬರ್ 2022 (09:23 IST)
ತುಮಕೂರು : ತಂದೆ ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು ಪುತ್ರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಣಿಗಲ್  ತಾಲೂಕಿನಲ್ಲಿ ನಡೆದಿದೆ.
 
ಕುಣಿಗಲ್ ತಾಲೂಕಿನ ಗಂಗೇನಹಳ್ಳಿ ಗ್ರಾಮದ ಸುಹೇಲ್ ಖಾನ್ (21) ಮೃತ ದುರ್ದೈವಿ. ಮನೆಯಲ್ಲೇ ಇದ್ದ ಸುಹೇಲ್ಗೆ ಅಡಿಕೆ ಕೀಳುವ ಕೆಲಸಕ್ಕೆ ಹೋಗುವಂತೆ ತಂದೆ ಬುದ್ದಿವಾದ ಹೇಳಿದ್ದಾರೆ.

ಇದರಿಂದ ಮನನೊಂದ ಯುವಕ ಗ್ರಾಮದ ಗಂಗಣ್ಣ ಎಂಬುವರ ಅಡಿಕೆ ತೋಟಕ್ಕೆ ಹೋಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವಿಷ ಸೇವಿಸಿ ತೀವ್ರ ಅಸ್ವಸ್ಥನಾಗಿದ್ದ ಯುವಕನನ್ನು ಕುಣಿಗಲ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ತುಮಕೂರಿಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ