ದೊಡ್ಡಣ್ಣನ ಸುಂಕಾಸ್ತ್ರಕ್ಕೆ ಭಾರತ ತಿರುಗೇಟು: ಚೀನಾದೊಂದಿಗೆ ಕೈಕುಲುಕಲು ಸಜ್ಜಾದ ಪ್ರಧಾನಿ ಮೋದಿ

Sampriya

ಭಾನುವಾರ, 31 ಆಗಸ್ಟ್ 2025 (10:26 IST)
Photo Credit X
ನವದೆಹಲಿ: ಅಮೆರಿಕವು ಭಾರತದ ಮೇಲೆ ಸುಂಕಾಸ್ತ್ರ ಪ್ರಯೋಗದ ಬೆನ್ನಲ್ಲೇ ಭಾರತ ಪ್ರತಿತಂತ್ರ ರೂಪಿಸಿದೆ. ಮಹತ್ವದ ಬೆಳವಣಿಗೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಏಳು ವರ್ಷಗಳ ನಂತರ ನೆರೆಯ ರಾಷ್ಟ್ರ ಚೀನಾಕ್ಕೆ ಭೇಟಿ ನೀಡಲಿದ್ದಾರೆ. 

ಪ್ರಧಾನಿ ಮೋದಿ ಭೇಟಿಯು ಬದಲಾಗುತ್ತಿರುವ ಭಾರತ-ಚೀನಾ ಬಾಂಧವ್ಯದಲ್ಲಿ ಮಹತ್ವದ ಕ್ಷಣವಾಗಿದೆ. ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ಭೌಗೋಳಿಕ ರಾಜಕೀಯಕ್ಕೆ ಅಡ್ಡಿಯಾಗಿರುವ ಟ್ರಂಪ್ ಸುಂಕಾಸ್ತ್ರ ಜಾಗತಿಕ ಆರ್ಥಿಕತೆ ಮೇಲೆ ಅನಿಶ್ಚಿತತೆಯ ಕಾರ್ಮೋಡ ಉಂಟು ಮಾಡಿರುವಂತೆಯೇ ಮೋದಿ ಅವರು ಶನಿವಾ ಟಿಯಾಂಜಿನ್‌ಗೆ ತಲುಪಿದ್ದಾರೆ.

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಪ್ರಧಾನಿ ಮೋದಿ ಭಾನುವಾರ  ಭೇಟಿಯಾಗಲಿದ್ದು, ದ್ವಿಪಕ್ಷೀಯ ಸಂಬಂಧಗಳನ್ನು ದೀರ್ಘಾವಧಿಯಲ್ಲಿ ಸ್ಥಿರಗೊಳಿಸುವುದು ಮತ್ತು ಆರ್ಥಿಕ ಸಹಕಾರವನ್ನು ಹೆಚ್ಚಿಸುವ ಕುರಿತು ಹೆಚ್ಚಿನ ಚರ್ಚೆಗಾಗಿ ನಿರ್ಧರಿಸಿದ್ದಾರೆ.

ಪ್ರಸ್ತುತ ಬಿಕ್ಕಟ್ಟಿನ ನಡುವೆ ವಿಶ್ವ ಆರ್ಥಿಕತೆಗೆ ಸ್ಥಿರತೆ ತರಲು ವಿಶ್ವದ ಎರಡು ದೊಡ್ಡ ಆರ್ಥಿಕತೆಗಳಾಗಿರುವ ಭಾರತ ಮತ್ತು ಚೀನಾ ಒಟ್ಟಿಗೆ ಕೆಲಸ ಮಾಡುವ ಅಗತ್ಯತೆಯ ಬಗ್ಗೆ ಪ್ರಧಾನಿ ಮೋದಿ ಕೂಡಾ ಈ ಹಿಂದೆ ಮಾತನಾಡಿದ್ದರು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ