ಅಪ್ಪನಿಗೆ ಸಿಕ್ಕ ಕೆಲಸ, ಮಗಳ ಸಂಭ್ರಮ
ಡೆಡ್ಲಿ ಕೊರೊನಾ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ ರೀತಿ ಅಷ್ಟಿಷ್ಟಲ್ಲ. ಸಾಕಷ್ಟು ಮನೆಗಳಲ್ಲಿ ಅನೇಕ ಸ್ಥಿತ್ಯಂತರಗಳನ್ನು ತಂದೊಡ್ಡಿತು. ಈಗೀಗ ನಿಧಾನ ಎಲ್ಲವೂ ಹಾದಿಗೆ ಬರುತ್ತಿದೆ. ಆದರೆ ಅದರ ಮಧ್ಯೆ ಉಂಟಾದ ನೋವು, ದುಃಖ, ಆದರೂ ನೋವ ನುಂಗಲೇಬೇಕು, ಮತ್ತೆ ಶಕ್ತಿ ತಂದುಕೊಳ್ಳಲೇಬೇಕು. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ಬಹಳ ಹೃದಯಸ್ಪರ್ಶಿಯಾಗಿದೆ. ಹೆಣ್ಣುಮಕ್ಕಳಿಗೆ ಹೆಚ್ಚು ಆಪ್ತವೆನ್ನಿಸುವ ಜೀವ ಅಪ್ಪನೇ. ಆ ಸಂಬಂಧ, ಅನುಬಂಧವನ್ನು ವಿವರಿಸಲಾಗದು. ಈ ವಿಡಿಯೋದಲ್ಲಿ ಮಗಳು ಶಾಲೆಯಿಂದ ಬಂದು ಕಣ್ಣುಮುಚ್ಚಿಕೊಂಡು ನಿಲ್ಲುತ್ತಾಳೆ. ಅಪ್ಪ ಹೊಸ ಕೆಲಸದ ಸಮವಸ್ತ್ರವನ್ನು ತನ್ನ ಎದೆಗೆ ಹಿಡಿದುಕೊಂಡು, ತನಗೆ ಹೊಸ ಕೆಲಸ ಸಿಕ್ಕಿತೆಂದು ಸರ್ಪ್ರೈಜ್ ಕೊಡುತ್ತಾನೆ. ಸ್ವಿಗ್ಗಿ ಕಂಪೆನಿಯಲ್ಲಿ ತನಗೆ ಕೆಲಸ ಸಿಕ್ಕಿದೆ ಎಂದು ಅಪ್ಪ ಹೇಳುವಾಗ ಮಗಳ ಮುಖದಲ್ಲಿನ ಆನಂದ ವಿವರಿಸಲಾಗದು. ಇಂಥ ದೇವತೆಯಂಥ ಮಗಳನ್ನು ಪಡೆದ ನೀವು ಅದೃಷ್ಟವಂತರು ಎಂದು ನೆಟ್ಟಿಗರು ಕೊಂಡಾಡಿದ್ದಾರೆ.