ಆಸ್ತಿಗಾಗಿ ಮಗನನ್ನು ಸುಪಾರಿ ನೀಡಿ ಕೊಂದ ತಂದೆ

ಗುರುವಾರ, 21 ಜನವರಿ 2021 (09:10 IST)
ಬೆಂಗಳೂರು : ಆಸ್ತಿ ವಿವಾದದ ಬಳಿಕ 50 ವರ್ಷದ ಉದ್ಯಮಿಯೊಬ್ಬ  ತನ್ನ ಮಗನನ್ನು ಕೊಲೆ ಮಾಡಲು ಸುಪಾರಿ ನೀಡಿ ಕೊಂದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕೇಶವ ಪ್ರಸಾದ ಕೊಲೆ ಮಾಡಿಸಿದ ತಂದೆ, ಕೌಶಲ್ ಪ್ರಸಾದ್ ಕೊಲೆಯಾದ ಮಗ. ಇಬ್ಬರು ಆಸ್ತಿ ವಿಚಾರಕ್ಕೆ ಜಗಳವಾಡಿದ್ದಾರೆ. ಇದರಿಂದ ಕೋಪಗೊಂಡ ತಂದೆ ಕೊಲೆಗಾರರಿಗೆ ಸುಪಾರಿ ನೀಡಿ ಮಗನನ್ನು ಅಪಹರಿಸಿ ಕೊಲೆ ಮಾಡಿಸಿದ್ದಾರೆ.  ಇತ್ತ ಮಗ ಕಾಣೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾನೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಗನಿಗಾಗಿ ಹುಡುಕಾಟ ನಡೆಸಿದಾಗ ಮೂರು ಗೋಣಿ ಚೀಲಗಳಲ್ಲಿ ತುಂಬಿಸಿಟ್ಟ ಆತನ ಶವ ಸಿಕ್ಕಿದೆ. ಬಳಿಕ ಪೊಲೀಸರು ಈ ಬಗ್ಗೆ ತನಿಖೆ ನಡೆಸಿದಾಗ ಆರೋಪಿ ತಂದೆ ಸಿಕ್ಕಿಹಾಕಿಕೊಂಡಿದ್ದು ಪೊಲೀಸರು ಆತನನ್ನು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ