ಅತೃಪ್ತ ಶಾಸಕರಿಗೆ ಅನರ್ಹತೆ ಭಯ: ಸುಪ್ರೀಂ ತೀರ್ಪಿನ ಬಳಿಕ ಡಿಕೆಶಿ ಹೊಸ ಬಾಂಬ್

ಬುಧವಾರ, 17 ಜುಲೈ 2019 (12:08 IST)
ಶಾಸಕರ ರಾಜೀನಾಮೆ ನೀಡಿರೋದಕ್ಕೆ ಸ್ಪೀಕರ್ ಕ್ರಮ ಕೈಗೊಳ್ಳುತ್ತಾರೆ. ಸ್ಪೀಕರ್ ಮೇಲೆ ಟೈಮ್ ಬಾಂಡ್ ಒತ್ತಡ ತರೋದು ಸರಿಯಲ್ಲ ಅಂತ ಸುಪ್ರೀಂ ಕೋರ್ಟ್ ತೀರ್ಪು ನೀಡಿರೋ ನಡುವೆಯೇ ಸಚಿವ ಡಿ.ಕೆ.ಶಿವಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ.

ಸುಪ್ರೀಂ ಕೋರ್ಟ್ ನೀಡಿರೋ ತೀರ್ಪನ್ನು ಸಚಿವ ಡಿ.ಕೆ.ಶಿವಕುಮಾರ್ ಸ್ವಾಗತ ಮಾಡಿದ್ದಾರೆ. ಆದರೆ ಇದೇ ವೇಳೆ ಹೊಸ ರಾಜಕೀಯ ದಾಳ ಉರುಳಿಸಿದ್ದಾರೆ.

ಸ್ಪೀಕರ್ ಗೆ ಇರೋ ಅಧಿಕಾರವನ್ನು ಕೋರ್ಟ್ ಎತ್ತಿ ಹಿಡಿದಿದೆ. ವಿಧಾನಸಭೆ ಕಲಾಪಕ್ಕೆ ಶಾಸಕರು ಹೋಗಬಹುದು, ಬಿಡಬಹುದು. ಆದರೆ ಕಾಂಗ್ರೆಸ್ ಪಕ್ಷದ ಕೈಯಲ್ಲಿ ವಿಪ್ ಇದೆ. ಪಕ್ಷದಿಂದ ಅನರ್ಹತೆ ಅನ್ನೋದೇ ಬೇರೆ ಕಾನೂನಿದೆ. ರಾಜೀನಾಮೆ ನೀಡಿರೋ ಶಾಸಕರಿಗೆ ಮನವಿ ಮಾಡೋದಾಗಿ ಹೇಳುತ್ತಲೇ ಪರೋಕ್ಷವಾಗಿ ಅನರ್ಹತೆಯ ಎಚ್ಚರಿಕೆ ನೀಡಿದ್ದಾರೆ.

ಜನರು ನಿಮ್ಮನ್ನು ಗೆಲ್ಲಿಸಿ ವಿಧಾನಸಭೆಗೆ ಕಳಿಸಿದ್ದಾರೆ. ಆದರೆ ನೀವು ಯಾರನ್ನೋ ನಂಬಿ ಹೋಗಬೇಡಿ. ಅನರ್ಹತೆಯ ಅಸ್ತ್ರಕ್ಕೆ ಬಲಿಯಾಗಬೇಡಿ ಅಂತ ಡಿ.ಕೆ.ಶಿವಕುಮಾರ್ ಅತೃಪ್ತ ಶಾಸಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ