ಸ್ಪೀಕರ್ ಏನು ಮಾಡಬೇಕೆಂದು ನಾವು ನಿರ್ದೇಶನ ಮಾಡಲು ಆಗಲ್ಲ ಎಂದ ಸುಪ್ರೀಂಕೋರ್ಟ್

ಮಂಗಳವಾರ, 16 ಜುಲೈ 2019 (12:06 IST)
ನವದೆಹಲಿ: ರೆಬೆಲ್ ಶಾಸಕರ ರಾಜೀನಾಮೆ ವಿಚಾರವಾಗಿ ವಾದ ವಿವಾದಗಳನ್ನು ಆಲಿಸಿದ ಸುಪ್ರೀಂಕೋರ್ಟ್ ಇದೀಗ ತನ್ನ ಅಭಿಪ್ರಾಯ ಮಂಡಿಸುತ್ತಿದೆ.


ರೆಬೆಲ್ ಶಾಸಕರ ಪರವಾಗಿ ವಾದ ಮಂಡಿಸಿದ ಮುಕುಲ್ ರೊಹ್ಟಗಿ ಸ್ಪೀಕರ್ ತಕ್ಷಣವೇ ರಾಜೀನಾಮೆ ಅಂಗೀಕರಿಸದೇ ಪರೋಕ್ಷವಾಗಿ ಸಮ್ಮಿಶ್ರ ಸರ್ಕಾರಕ್ಕೆ ಸಹಾಯ ಮಾಡಿದರು ಎಂದು ಆರೋಪ ಮಾಡಿದ್ದರು.

ಈ ವಾದಗಳನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಸ್ಪೀಕರ್ ಏನು ಮಾಡಬೇಕೆಂದು ನಾವು ನಿರ್ದೇಶನ ಮಾಡಲು ಸಾಧ್ಯವಿಲ್ಲ. ಆದರೆ ಸ್ಪೀಕರ್ ಅನಗತ್ಯವಾಗಿ ಇದನ್ನು ಎಳೆಯಲೂ ಬಾರದು ಎಂದಿದ್ದಾರೆ. ಇದೀಗ ಮುಕುಲ್ ರೋಹ್ಟಗಿ ಮತ್ತು ಸ್ಪೀಕರ್ ಪರ ವಕೀಲ್ ಅಭಿಷೇಕ್ ಮನು ಸಿಂಘ್ವಿ ನಡುವೆ ವಾದ ವಿವಾದ ನಡೆಯುತ್ತಿದೆ. ಬಳಿಕವಷ್ಟೇ ಕೋರ್ಟ್ ಅಂತಿಮ ತೀರ್ಪು ನೀಡಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ