ಅತೃಪ್ತ ಶಾಸಕರ ಭವಿಷ್ಯ ಬರೆದ ಸುಪ್ರೀಂ ಕೋರ್ಟ್

ಮಂಗಳವಾರ, 16 ಜುಲೈ 2019 (16:15 IST)

ಮೈತ್ರಿ ಸರಕಾರಕ್ಕೆ ಸವಾಲ್ ಎಸೆದು ರಾಜೀನಾಮೆ ನೀಡಿರೋ ಅತೃಪ್ತ ಶಾಸಕರ ಭವಿಷ್ಯ ಬುಧವಾರದಂದು ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ನಿರ್ಧಾರಗೊಳ್ಳಲಿದೆ.

ಅತೃಪ್ತ ಶಾಸಕರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟಿನ ತ್ರಿಸದಸ್ಯ ಪೀಠವು ಸುದೀರ್ಘ ವಿಚಾರಣೆ ನಡೆಸಿದೆ. ಬುಧವಾರದಂದು ತನ್ನ ತೀರ್ಮಾನ ಪ್ರಕಟ ಮಾಡೋದಾಗಿ ಕೋರ್ಟ್ ಹೇಳಿದೆ.

ಅತೃಪ್ತ ಶಾಸಕರ ಪರವಾಗಿ ಮುಕುಲ್ ರೋಹಟಗಿ ವಾದ ಮಂಡನೆ ಮಾಡಿದರೆ, ಸ್ಪೀಕರ್ ಪರವಾಗಿ ಅಭಿಷೇಕ್ ಮನು ಸಿಂಘ್ವಿ ವಾದಿಸಿದ್ರು. ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪರವಾಗಿ ರಾಜೀವ್ ಧವನ್ ವಾದಿಸಿದ್ರು.

ಬುಧವಾರ ಬೆಳಗ್ಗೆ 10:30ಕ್ಕೆ ತೀರ್ಪು ಪ್ರಕಟಿಸುವುದಾಗಿ ಹೇಳಿದ ಕೋರ್ಟ್ ಆದೇಶ ಹೊರಡಿಸೋವರೆಗೂ ಯಥಾ ಸ್ಥಿತಿ

ಕಾಪಾಡಿಕೊಳ್ಳಬೇಕೆಂದು ಸೂಚನೆ ನೀಡಿದೆ.

ಮೈತ್ರಿ ಸರಕಾರ ಕೆಡವಲು ಹಾಗೂ ಸಕಾರಣವಿಲ್ಲದೇ ಅತೃಪ್ತ ಶಾಸಕರು ರಾಜೀನಾಮೆ ನೀಡಿದ್ದಾರೆ. ಇವರ ಉದ್ದೇಶ ಸರಕಾರ ಕೆಡವುದೇ ಆಗಿದೆ. ಇದು ಪ್ರಜಾತಂತ್ರಕ್ಕೆ ಮಾರಕ. ಅಲ್ಲದೇ ಸ್ಪೀಕರ್ ಗೆ ಈ ವಿಷಯದಲ್ಲಿ ಅಧಿಕಾರವಿದ್ದು, ಅವರು ವಿಚಾರಣೆ ನಡೆಸೋದಕ್ಕೆ ಕಾಲಾವಕಾಶ ಬೇಕು ಎಂದು ವಾದದಲ್ಲಿ ಸರಕಾರದ ಪರವಾಗಿ ನ್ಯಾಯಾಲಯದ ಗಮನಕ್ಕೆ ತರಲಾಗಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ