ಪೊಲೀಸರ ನೋಡಿ ಹೆದರಿ ತಪ್ಪಿಸಿಕೊಂಡು ಹೋಗುವ ಅವಘಡದಲ್ಲಿ ಅಪಘಾತ

ಭಾನುವಾರ, 12 ಡಿಸೆಂಬರ್ 2021 (20:58 IST)
ವಿಜಯನಗರದ ಸಂಚಾರ ಠಾಣೆ ಪೆÇಲೀಸರು ಡಿ.9ರಂದು ಆರ್‍ಪಿಸಿ ಲೇಔಟ್‍ನ ಸರ್ವೀಸ್ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಪೆÇಲೀಸರ ನೋಡಿ ಹೆದರಿ ತಪ್ಪಿಸಿಕೊಂಡು ಹೋಗುವ ಅವಘಡದಲ್ಲಿ  ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡಿದ್ದ ಕೌಶಿಕ್ ಚಿಕೆತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. 
ಸಂಚಾರ ಪೆÇಲೀಸರು ಗುರುವಾರ ವಾಹನ ತಪಾಸಣೆ ನಡೆಸುವ ವೇಳೆ ಅಪಘಾತಕ್ಕೀಡಾಗಿ ಪ್ರಜ್ಞೆಹೀನಾವಗಿ ಬಿದ್ದಿದ್ದ ಕೌಶಿಕ್‍ನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮೂರು ದಿನಗಳಿಂದಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾನೆ. ಅಪಘಾತವಾದ ದಿನವೇ ತಲೆಗೆ ಗಂಭೀರವಾದ ಪೆಟ್ಟು ಬಿದ್ದಿದ್ದ ಕಾರಣ ಮೆದುಳು ನಿಷ್ಕ್ರಿಯೆಯಾಗಿದ್ದರಿಂದ ಚಿಕಿತ್ಸೆಗೆ ಸ್ಪಂದಿಸಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ. 
ಡಿ.9ರಂದು ಪುಸ್ತಕ ತರುವುದಾಗಿ ತನ್ನ ಪೆÇೀಷಕರಿಗೆ ತಿಳಿಸಿ ಕೌಶಿಕ್ ಸ್ನೇಹಿತ ಚೇತನ್ ಜತೆಗೆ ಹೋಗಿದ್ದ. ಆದರೆ, ನಿಜವಾಗಿಯೂ ಯಾವ ಕಾರಣಕ್ಕೆ ಇಬ್ಬರು ಹೊರಗೆ ಹೋಗಿದ್ದರು ಎಂಬುದು ಗೊತ್ತಿಲ್ಲ. ಇಬ್ಬರು ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದರು. ಈ ವೇಳೆ ಆರ್‍ಪಿಸಿ ಲೇಔಟ್‍ನ ಸರ್ವೀಸ್ ರಸ್ತೆಯಲ್ಲಿ ವಿಜಯನಗರ ಸಂಚಾರಿ ಠಾಣೆ ಪೆÇಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಈ ಇಬ್ಬರು ಯುವಕರು ಹೆಲ್ಮೆಟ್ ಧರಿಸದೆ ಬರುವುದನ್ನು ಗಮನಿಸಿದ ಪೆÇಲೀಸರು ಬೈಕ್ ನಿಲ್ಲಿಸುವಂತೆ ಕೈ ಅಡ್ಡ ಹಾಕಿದ್ದಾರೆ. ಇದರಿಂದ ಹೆದರಿ ವೇಗವಾಗಿ ಬೈಕ್ ಚಾಯಿಸಿದ್ದರಿಂದ ಪೆÇಲೀಸರು ಅವರನ್ನು ಹಿಡಿಯಲು ಹಿಂಬಾಲಿಸಿಕೊಂಡು ಹೋದ ಪರಿಣಾಮ ಭೀತಿಯಿಂದ ಬೈಕ್ ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದಿದ್ದಾರೆ. ಈ ವೇಳೆ ಕೌಶಿಕ್ ತಲೆ ರಸ್ತೆಗೆ ಹೊಡೆದು ಗಂಭೀರ ಗಾಯವಾಗಿದೆ. ಹೀಗಾಗಿ, ನನ್ನ ಪುತ್ರನ ಸಾವಿಗೆ ವಿಜಯನಗರ ಸಂಚಾರ ಪೆÇಲೀಸರೆ ನೇರ ಕಾರಣ ಎಂದು ಕೌಶಿಕ್ ತಂದೆ ಸರವಣ ಆರೋಪಿಸಿದ್ದಾರೆ. 
ಅಲ್ಲದೆ, ನನ್ನ ಪುತ್ರನಿಗೆ ಬಂದ ಸ್ಥಿತಿ ಇನ್ಯಾರಿಗೂ ಬರಬಾರದು. ಹಾಗಾಗಿ, ಇನ್ನು ಮುಂದಾದರು ಸಂಚಾರ ಪೆÇಲೀಸರು ಈ ರೀತಿಯ ಎಡವಟ್ಟು ಮಾಡದಂತೆ ನಗರ ಪೆÇಲೀಸ್ ಆಯುಕ್ತ ಕಮಲ್‍ಪಂತ್ ಮತ್ತು ಸಂಚಾರ ವಿಭಾಗದ ಹಿರಿಯ ಪೆÇಲೀಸ್ ಅಧಿಕಾರಿಗಳು ಸಂಚಾರ ಪೆÇಲೀಸರಿಗೆ ಕಟುವಾಗಿ ತಿದ್ದಿ ಬುದ್ದಿ ಹೇಳಬೇಕು ಎಂದು ಮನವಿ ಮಾಡಿದ್ದಾರೆ. 
ಏನಿದು ಘಟನೆ:
ಡಿ.9ರಂದು ವಿಜಯನಗರ ಸಂಚಾರ ಠಾಣೆ ಪಿಎಸ್‍ಐ ನಿಂಗರಾಜು ಮತ್ತು ಹೆಡ್ ಕಾನ್‍ಸ್ಟೆಬಲ್ ಕೃಷ್ಣಮೂರ್ತಿ ಅವರು ಆರ್‍ಪಿಸಿ ಲೇಔಟ್‍ನ ಸರ್ವೀಸ್ ರಸ್ತೆಯಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಅದೇ ವೇಳೆ ಕೌಶಿಕ್ ಮತ್ತು ಆತನ ಸ್ನೇಹಿತ ಚೇತನ್ ದ್ವಿಚಕ್ರ ವಾಹನದಲ್ಲಿ ಬಂದಿದ್ದು, ಸಂಚಾರ ಪೆÇಲೀಸರನ್ನು ಕಂಡು ಸರ್ವೀಸ್ ರಸ್ತೆಗೆ ಹೋಗದೆ, ಮುಖ್ಯ ರಸ್ತೆಯಲ್ಲಿ ವೇಗವಾಗಿ ಬರುವಾಗ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಕೌಶಿಕ್ ಗಂಭೀರ ಗಾಯವಾಗಿದ್ದ. ಚೇತನ್ ಬೈಕ್ ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದ. ಗಾಯಗೊಂಡಿದ್ದ ಕೌಶಿಕ್‍ನನ್ನು   ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲದೇ, ಈ ಸಂಬಂಧ ವಿಜಯನಗರ ಸಂಚಾರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.  

ಲ್ಮೆಟ್ ಧರಿಸದೇ ಬೈಕ್ ಚಲಾಯಿಸಿಕೊಂಡು ಬಂದ ಯುವಕರನ್ನು ವಿಜಯನಗರ ಸಂಚಾರಿ ಪೆÇಲೀಸರು ಅಡ್ಡಗಟ್ಟಿ ಅಟ್ಟಾಡಿಸಿಕೊಂಡು ಹಿಡಿಯಲು ಯತ್ನಿಸಿರುವುದೇ ಕೌಶಿಕ್ ಪ್ರಾಣ ಕಳೆದುಕೊಳ್ಳಲು ಕಾರಣವಾಗಿದೆ ಸಾರ್ವಜನಿಕರು ಆರೋಪಿಸಿದ್ದಾರೆ.  
ನಗರದಲ್ಲಿ ಸಂಚಾರ ಪೆÇಲೀಸರು ಮಾನವೀಯತೆ ಮರೆತು ಜನಗಳ ಪ್ರಾಣದ ಜತೆ ಚಲ್ಲಾಟವಾಡುತ್ತಿದ್ದಾರೆ. ವಾಹನ ತಪಾಸಣೆ ಮಾಡಲು ರೀತಿ, ನೀತಿಗಳಿವೆ. ಒಂದು ವೇಳೆ ಸಂಚಾರ ನಿಯಮ ಉಲ್ಲಂಘಿಸಿದ ಸವಾರ ದೇಶ ಬಿಟ್ಟು ಹೋಗುವುದಿಲ್ಲ. ಆತನ ವಾಹನದ ಸಂಖ್ಯೆ ಪಡೆದು ಸಂಚಾರ ನಿಯಮ ಉಲ್ಲಂಘಿಸಿರುವ ಬಗ್ಗೆ ಆತನ ಗಮನಕ್ಕೆ ತಂದು ದಂಡ ವಿಧಿಸಬಹುದು. ಅಥವಾ, ನೋಟಿಸ್ ನೀಡಬಹುದು. ಇದೆಲ್ಲವನ್ನು ಬಿಟ್ಟು ರಸ್ತೆಗಳನ್ನು ವಾಹನಗಳಿಗೆ ಕೈ ಅಡ್ಡ ಹಾಕಿ ಕೀ ಕಿತ್ತುಕೊಳ್ಳುವುದು, ಹಿಂಬಾಲಿಕೊಮಡು ಹೋಗಿ ಹಿಡಿಯುವುದು ಮಾಡುತ್ತಿರುವುದು ಅಮಾಯಕರ ಪ್ರಾಣಕ್ಕೆ ಎರವಾಗುತ್ತಿದೆ. ಪೆÇಲೀಸರು ಜನರ ಜೀವ ರಕ್ಷರಾಗಬೇಕೆ ವಿನಃ, ಪ್ರಾಣ ಬಲಿ ಪಡೆಯುವ ಭಕ್ಷಕರಾಗಬಾರದು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 
 
ಕಣ್ಣುಗಳ ದಾನಕ್ಕೆ ಪುನೀತ್ ಪ್ರೇರಣೆ: 
ದಿ. ಪುನೀತ್ ರಾಜ್‍ಕುಮಾರ್ ಅವರು ಕಣ್ಣು ದಾನ ಮಾಡಿರುವುದು ನಮಗೆ ಪ್ರೇರಣೆಯಾಗಿದೆ. ಹಾಗಾಗಿ, ನನ್ನ ಪುತ್ರನ ಜೀವ ಮರಳಿ ಪಡೆಯಲಾಗುವುದಿಲ್ಲ. ಆದರೆ, ಅವನ ಕಣ್ಣುಗಳು ಮತ್ತೊಬ್ಬರ ಬಾಳಿಗೆ ಬೆಳಕು ನೀಡಲಿದೆ ಎಂದು ಕೌಶಿಕ್ ಕಣ್ಣುಗಳನ್ನು ದಾನ ಮಾಡಲಾಗಿದೆ ಎಂದು ಮೃತ ಕೌಶಿಕ್ ತಂದೆ ಸರವಣ ತಿಳಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ