ನಶೆಯಲ್ಲಿದ್ದ ಪುಡಿ ರೌಡಿಗಳ ಗುಂಪು ..!

ಶನಿವಾರ, 11 ಡಿಸೆಂಬರ್ 2021 (20:35 IST)
ನಶೆಯಲ್ಲಿದ್ದ ಪುಡಿ ರೌಡಿಗಳ ಗುಂಪು ಕಾಮಾಕ್ಷಿ ಪಾಳ್ಯದಲ್ಲಿ ಮತ್ತೆ ಬಾಲ ಬಿಚ್ಚಿದೆ,ಅಮಲಿನಲ್ಲಿದ್ದ ಐನಾತಿಗಳು ರಸ್ತೆಯ ಬದಿಯಲ್ಲಿದ್ದ ನಿಲ್ಲಿಸಿದ ಕಾರುಗಳ ಗಾಜುಗಳನ್ನು ಪುಡಿಗಟ್ಟಿ ವಿಕೃತಿ ಮೆರೆದಿದೆ.ಕಾಮಾಕ್ಷಿ ಪಾಳ್ಯದಲ್ಲಿ ಘಟನೆ ನಡೆದಿದ್ದು ತಡ ರಾತ್ರಿ 7 ರಿಂದ 8 ಮಂದಿ ಪುಂಡಾಗುಗಳ ಈ ಗ್ಯಾಂಗ್ ಕೈಯಲ್ಲಿದ್ದ ಲಾಂಗು ಮಚ್ಚುಗಳನ್ನ ಹಿಡಿದು ಕಾರುಗಳನ್ನ ಜಖಂಗೊಳಿಸಿದ್ದಾರೆ. 6 ಕ್ಕೂ ಹೆಚ್ಚು ವಾಹನಗಳನ್ನ ದ್ವಂಸಗೊಳಿಸಿರುವ ಈ ಗ್ಯಾಂಗ್ ವಿರುದ್ದ  ಪ್ರಕರಣ ದಾಖಲಿಸಿಕೊಂಡಿರುವ ಕಾಮಾಕ್ಷಿ ಪಾಳ್ಯ ಪೊಲೀಸರು ಕಿಡೀಗೇಡಿಗಳಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ