ಕುಖ್ಯಾತ ರೌಡಿಶೀಟರ್ ಜೆಸಿಬಿ ನಾರಾಯಣನ ಹತ್ಯೆಗೆ ಯತ್ನ

ಶುಕ್ರವಾರ, 10 ಡಿಸೆಂಬರ್ 2021 (14:34 IST)
ಬೆಂಗಳೂರು: ಕುಖ್ಯಾತ ರೌಡಿಶೀಟರ್ ಜೆಸಿಬಿ ನಾರಾಯಣನ ಹತ್ಯೆಗೆ ಯತ್ನಿಸಿ ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಈಗಾಗಲೇ ಕಾರ್ಯಾಚರಣೆ ಕೈಗೊಂಡಿದ್ದು, ಒಂದೊಂದು ತಂಡ ಪ್ರತ್ಯೇಕವಾಗಿ ಹಲವು ಮಾಹಿತಿಗಳನ್ನು ಕಲೆ ಹಾಕಿವೆ ಎನ್ನುವ ಮಾಹಿತಿ ಹೊರಬಿದ್ದಿದ್ದೆ.
 
ಘಟನೆ ನಡೆದ ನಗರದ ಬೇಗೂರು ಕ್ಲಾಸಿಕ್ ಲೇಔಟ್  12ನೆ ಕ್ರಾಸ್‌ನ ಡಿಎಲ್ಎಫ್ ರಸ್ತೆಯಲ್ಲಿರುವ ಸಿಸಿಟಿವಿ ಹಾಗೂ ಅಕ್ಕಪಕ್ಕದ ರಸ್ತೆಯಲ್ಲಿನ ಸಿಸಿ ಕ್ಯಾಮರಾ ಪುಟೇಜ್‌ಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿ ಆರೋಪಿಗಳ ಮುಖಚಹರೆಯನ್ನು ತನಿಖಾ ತಂಡಗಳು ಪತ್ತೆಹಚ್ಚಿವೆ. ಆರೋಪಿಗಳು ಜೆಸಿಬಿ ನಾರಾಯಣನ ಎದುರಾಳಿ ಗುಂಪಿನವರೇ ಅಥವಾ ಹಳೆ ವೈಷಮ್ಯದಿಂದ ಪರಿಚಯಸ್ಥರೇ ಹತ್ಯೆಗೆ ಸಂಚು ರೂಪಿಸಿದ್ದರೆ ಎಂಬ ಬಗ್ಗೆಯೂ ತನಿಖಾ ತಂಡಗಳು ಮಾಹಿತಿ ಕಲೆಹಾಕುತ್ತಿವೆ ಎನ್ನಲಾಗುತ್ತಿದೆ. 
 
ಪ್ರಕರಣದ ಹಿನ್ನಲೆ: 
 
ಹಾಡಹಗಲೇ ಜನನಿಬಿಡ ರಸ್ತೆಯಲ್ಲಿ ಏಕಾಏಕಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ರಾಜಾರೋಷವಾಗಿ ಆರೋಪಿಗಳು ರಸ್ತೆಯಲ್ಲಿ ಓಡಾಡಿಕೊಂಡು ಹತ್ಯೆಗೆ ಯತ್ನಿಸಿರುವುದು ಸಾರ್ವಜನಿಕರನ್ನು ಆತಂಕಕ್ಕೀಡುಮಾಡಿತ್ತು. ಡಿಸೆಂಬರ್ 1ರಂದು ಬೆಳಗ್ಗೆ ಹುಳಿಮಾವು ಠಾಣೆ ರೌಡಿಶೀಟರ್ ಜೆಸಿಬಿ ನಾರಾಯಣ ತಮ್ಮ ಕಾರಿನಲ್ಲಿ ಹೋಗುತ್ತಿದ್ದಾಗ ಹುಳಿಮಾವು ಡಿ.ಎಲ್‌.ಎಫ್ ರಸ್ತೆಯಲ್ಲಿ ಹೊಂಚು ಹಾಕಿದ್ದ ನಾಲೈದು ಮಂದಿ ದುಷ್ಕರ್ಮಿಗಳು ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಏಕಾಏಕಿ ನಾರಾಯಣನ ಕಾಲಿನ  ಬಳಿ ದೌಡಾಯಿಸಿ ಹಲ್ಲೆ ನೆಡೆಸಲು ಯತ್ನಿಸಿದ್ದರು.
 
ಅಡ್ಡಗಟ್ಟಿ ನೆಡೆಸಿದ ದಾಳಿಯ ತೀವ್ರತಗೆ ನಾರಾಯಣ ತಕ್ಷಣ ಕಾರನ್ನು ಹಿಂದಕ್ಕೆ ಪಡೆದುಕೊಳ್ಳುತ್ತಿದ್ದಂತೆ ದುಷ್ಕರ್ಮಿಗಳು ಕೈಯಲ್ಲಿ ಮಾರಕಾಸ್ತ್ರ ಹಿಡಿದು ಸ್ವಲ್ಪ ದೂರ ಬೆನ್ನಟ್ಟಿದ್ದರು. ಆದರೆ ನಾರಾಯಣ ಕೂದಲೆಳ ಅಂತರದಲ್ಲಿ ಅತಿ ವೇಗವಾಗಿ ಕಾರನ್ನು ರಿವರ್ಸ್ ಪಡೆದುಕೊಂಡು ಬೇರೆರಸ್ತೆಯಲ್ಲಿ ಕ್ಷಣಾರ್ಧದಲ್ಲಿ ಎಸ್ಟೇಪ್ ಆಗಿ ಪ್ರಾಣ ಉಳಿಸಿಕೊಂಡಿದ್ದನು. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. 
 
ಘಟನೆಯ ಬಗ್ಗೆ ನಾರಾಯಣ ತಡವಾಗಿ ಬೇಗೂರು ಪೊಲೀಸ್ ಠಾಣೆಗೆ ದೂರು ನೀಡಿದ್ದನು. ಆರೋಪಿಗಳ ಪತ್ತೆಗಾಗಿ ರಚಿಸಲಾಗಿರುವ ನಾಲ್ಕು ತಂಡಗಳು ಆರೋಪಿಗಳ ಬಂಧನಕ್ಕೆ ಬಲೆ ಬೀಸಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ