ವೃದ್ಧೆಯನ್ನು ಛತ್ರಿಯಿಂದ ಹೊಡೆದು ಕೊಂದ ವೃದ್ಧ!

ಮಂಗಳವಾರ, 8 ಆಗಸ್ಟ್ 2023 (12:08 IST)
ಜೈಪುರ : ರಾಜಸ್ಥಾನದ ಉದಯಪುರದಲ್ಲಿ 60 ವರ್ಷದ ವ್ಯಕ್ತಿಯೊಬ್ಬ 85 ವರ್ಷದ ವೃದ್ಧೆಯ ಮೇಲೆ ಛತ್ರಿಯಿಂದ ಮನಬಂದಂತೆ ಹಲ್ಲೆಗೈದು ಹತ್ಯೆ ಮಾಡಿರುವ ಆಘಾತಕಾರಿ ವೀಡಿಯೋವೊಂದು ವೈರಲ್ ಆಗಿದೆ.
 
ಮೃತ ವೃದ್ಧೆಯನ್ನು ಕಲ್ಕಿ ಬಾಯಿ ಗಮೆತಿ ಎಂದು ಗುರುತಿಸಲಾಗಿದೆ. ವೃದ್ಧನು ವೃದ್ಧೆಯ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಅಲ್ಲಿಯೇ ಇದ್ದ ಜನ ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ.

ಇದೀಗ ಈ ವೀಡಿಯೋ ವೈರಲ್ ಆಗುತ್ತಿದೆ. ಇಬ್ಬರು ಅಪ್ರಾಪ್ತರು ವೀಡಿಯೋ ಮಾಡಿವುದರಲ್ಲಿ ಬ್ಯುಸಿಯಗಿದ್ದರೇ ಹೊರತು ವೃದ್ಧೆಯನ್ನು ಉಳಿಸಲು ಪ್ರಯತ್ನ ಮಾಡಲಿಲ್ಲ. ಈ ಹಿನ್ನೆಲೆಯಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಕುಡಿದ ಮತ್ತಿನಲ್ಲಿ ವೃದ್ಧ ಆರೋಪಿ ಪ್ರತಾಪ್ ಸಿಂಹ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವೃದ್ಧೆಯ ಮೇಲೆ ಹಲ್ಲೆ ಮಾಡುವಾಗ ತಡೆಯಲು ಓರ್ವ ವ್ಯಕ್ತಿ ಯತ್ನಿಸಿದ್ದಾರೆ. ಆದರೆ ಸಿಂಗ್ ವ್ಯಕ್ತಿಯ ಮಾತನ್ನು ಕೇಳಿಸಿಕೊಳ್ಳದೇ ಛತ್ರಿಯಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ