ಮಹಿಳೆಯೊಬ್ಬಳ ಸ್ಥಿತಿ ಗಂಭೀರ: ಎರಡು ಗುಂಪುಗಳ ನಡುವೆ ಮಾರಾಮಾರಿ...!
ಹುದ್ದೆ ನೇಮಕ ವಿಚಾರದಲ್ಲಿ ಗೊಂದಲವುಂಟಾಗಿ ಯೋಜನಾಧಿಕಾರಿಯ ಸಮ್ಮುಖದಲ್ಲೆ ಎರಡು ಗುಂಪುಗಳ ನಡುವೆ ಮಾರಾಮಾರಿಯಾದ ಘಟನೆ ನಡೆದಿದೆ. ಮಹಿಳೆಯೊಬ್ಬಳ ಸ್ಥಿತಿ ಚಿಂತಾಜನಕವಾಗಿದೆ.
ಅಂಗನವಾಡಿ ಕಾರ್ಯಕರ್ತೆ ಹುದ್ದೆ ನೇಮಕ ವಿಚಾರದಲ್ಲಿ ಗೊಂದಲವುಂಟಾಗಿ ಯೋಜನಾಧಿಕಾರಿಯ ಸಮ್ಮುಖದಲ್ಲೆ ಎರಡು ಗುಂಪುಗಳ ನಡುವೆ ಮಾರಾಮಾರಿಯಾದ ಘಟನೆ ನಡೆದಿದೆ. ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಕೊರೆಕಲ್ ತಾಂಡ ಗ್ರಾಮದಲ್ಲಿ ಒಂದು ಅಂಗನವಾಡಿ ಹುದ್ದೆಗಾಗಿ ಇಬ್ಬರು ಅರ್ಜಿ ಸಲ್ಲಿಸಿದ್ರು. ಈ ನಡುವೆ ಶಿಶು ಅಭಿವೃದ್ಧಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇರಿಟ್ ಆಧಾರದಲ್ಲಿ ನೇಮಕಾತಿ ಪ್ರಕ್ರೀಯೆ ಪೂರ್ಣಗೊಳಿಸಿತ್ತು. ಆದ್ರೆ ಇದಕ್ಕೆ ಆಕ್ಷೇಪ ವ್ಯಕ್ತವಾದ ಹಿನ್ನಲೆಯಲ್ಲಿ ಯೋಜನಾಧಿಕಾರಿ ಜಗನ್ನಾಥ ಗಾಧಾ, ತಾಂಡಾಗೆ ತೆರಳಿ ಪರಿಶಿಲನೆ ಮಾಡ್ತಿದ್ದರು. ಈ ವೇಳೆಯಲ್ಲಿ ಎರಡು ಅಭ್ಯರ್ಥಿಗಳ ಪರ ಬೆಂಬಲಿಗರು ಒಬ್ಬರ ಮೇಲೊಬ್ಬರು ದೋಣ್ಣೆ, ಕಲ್ಲಿನಿಂದ ಹಲ್ಲೆ ಮಾಡಿಕೊಂಡಿದ್ದಾರೆ. ಘಟನೆಯಲ್ಲಿ ನಾಲ್ವರಿಗೆ ಗಾಯಗಳಾಗಿದ್ದು ಗಾಯಾಳುಗಳನ್ನು ಸಂತಪೂರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು ಈ ಪೈಕಿ ಮಹಿಳೆಯೊಬ್ಬಳ ಸ್ಥಿತಿ ಚಿಂತಾಜನಕವಾಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಠಾಣಾಕುಶನೂರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.