ಕುಡಿದ ನಶೆಯಲ್ಲಿ ನಡುರಸ್ತೆಯಲ್ಲಿ ಹೊಡೆದಾಡಿದ ಪೊಲೀಸರು

ಗುರುವಾರ, 9 ಆಗಸ್ಟ್ 2018 (14:01 IST)
ಕುಡಿದ ಅಮಲಿನಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಗಳು ನಡುರಸ್ತೆಯಲ್ಲಿ ಗಲಾಟೆ ಮಾಡಿಕೊಂಡಿರುವ ಘಟನೆ ಗದಗ- ಬೆಟಗೇರಿ ಸಹಸ್ರಾರ್ಜುನ ಸರ್ಕಲ್ ಬಳಿ ನಡೆದಿದೆ.

ಗದಗ ಪೊಲೀಸರ ಫೈಟ್ ವಿಡಿಯೋ ಈಗ ಎಲ್ಲಡೆ ವೈರಲ್ ಆಗಿದೆ. ಗದಗ ಮಹಿಳಾ ಠಾಣೆಯ ಸಿಬ್ಬಂದಿ ಶರಣಪ್ಪ ಬಸಾಪೂರ ಹಾಗೂ ಗದಗ ಗ್ರಾಮೀಣ ಠಾಣೆ ಸಿಬ್ಬಂದಿ ಮಂಜುನಾಥ ಬಾರಕೇರ್ ಎಂಬ ಪೊಲೀಸ್ ಸಿಬ್ಬಂದಿಗಳೇ ಕಿತ್ತಾಡಿಕೊಂಡ ಸಿಬ್ಬಂದಿಗಳಾಗಿದ್ದಾರೆ. ಕುಡಿದ ಮತ್ತಿನಲ್ಲಿ‌ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ್ದಾರೆ ಎನ್ನಲಾಗುತ್ತಿದೆ.

ಈ ಇಬ್ಬರ ಪೊಲೀಸರ ಗಲಾಟೆ ಸಾರ್ವಜನಿಕರಿಗೆ ಕೆಲಕಾಲ ಮನರಂಜನೆಯಾಗಿತ್ತು. ಶಿಸ್ತಿನ ಇಲಾಖೆಗೆ ಕಪ್ಪು ಮಸಿ ಬಳಿಯಲು ಮುಂದಾದ ಸಿಬ್ಬಂದಿಗಳ ಮೇಲೆ ಈಗ ಶಿಸ್ತಿನ ಕ್ರಮಕ್ಕೆ ಆಗ್ರಹಿಸಲಾಗಿದೆ. ಸಾರ್ವಜನಿಕ ವಲಯದಲ್ಲಿ ಗಲಾಟೆ ಮಾಡಿಕೊಂಡ ಇಬ್ಬರು ಸಿಬ್ಬಂದಿಗಳ ಮೇಲೆ ಸೂಕ್ತಕ್ರಮ ಕೈಗೊಳ್ಳುವುದಾಗಿ ಎಸ್.ಪಿ ಸಂತೋಷಬಾಬು ಸ್ಪಷ್ಟನೆ ನೀಡಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ