ಮಹದಾಯಿ ಹೋರಾಟಕ್ಕೂ ಉತ್ತರ ಕರ್ನಾಟಕ ಪ್ರತ್ಯೇಕ ಕೂಗಿಗೂ ಯಾವುದೇ ಸಂಬಂಧವಿಲ್ಲ ಎಂದ ಹೋರಾಟಗಾರರು!

ಶನಿವಾರ, 28 ಜುಲೈ 2018 (19:41 IST)
ಮಹದಾಯಿ ಹೋರಾಟಕ್ಕೂ ಉತ್ತರ ಕರ್ನಾಟಕ ಪ್ರತ್ಯೇಕ ಕೂಗಿಗೂ ಯಾವುದೇ ಸಂಬಂಧವಿಲ್ಲ ಅಂತಾ ಕಳಸಾ ಬಂಡೂರಿ ಹೋರಾಟಗಾರ ಹಾಗೂ ರೈತ ಸೇನಾ ರಾಜ್ಯಾಧ್ಯಕ್ಷ ವೀರೇಶ್ ಸೊಬರದಮಠ ಹೇಳಿಕೆ ನೀಡಿದ್ರು. ಈ ಕುರಿತು ಪತ್ರಿಕಾ ಗೋಷ್ಠಿ ನಡೆಸಿದ ಸೊಬರದಮಠ, ಉತ್ತರ ಕರ್ನಾಟಕ ಅಭಿವೃದ್ಧಿಯಾಗಿಲ್ಲ ಅನ್ನುವ ನೋವು ನಮಗೂ ಇದೆ. ಹಾಗಂತ ಮಹದಾಯಿ ಹೋರಾಟವನ್ನು ಪ್ರತ್ಯೇಕ ರಾಜ್ಯ ಕೂಗಿಗೆ ಬಳಸೋದು ಸರಿಯಲ್ಲ ಅಂತಾ ಹೇಳಿದ್ರು. ಸಮಗ್ರ ಉತ್ತರ ಕರ್ನಾಟಕ ಅಭಿವೃದ್ಧಿಯ ಹೋರಾಟಕ್ಕೆ ನಾವೇನು ಹೊರತಾಗಿಲ್ಲ. ನಾವೂ ಸಹಿತ ಕೈ ಜೋಡಿಸುತ್ತೇವೆ. 
ಆದರೆ ಮಹದಾಯಿ ಹೋರಾಟ ಅಖಂಡ ಕರ್ನಾಟಕದ ಹೋರಾಟವಾಗಿದ್ದು, ಇದು ಉತ್ತರ ಕರ್ನಾಟಕಕ್ಕೆ ಮಾತ್ರ ಸೀಮಿತವಾದ ಹೋರಾಟವಲ್ಲ.
ಉತ್ತರ ಕರ್ನಾಟಕ ಅಭಿವೃದ್ಧಿಯಾಗಬೇಕಾದ್ರೆ ಜನಪ್ರತಿನಿಧಿಗಳ ಮನೆ ಮುಂದೆ ಪ್ರತಿಭಟಿಸೋಣ ಅಂತಾ ಆಕ್ರೋಶ ವ್ಯಕ್ತಪಡಿಸಿದ್ರು. ಜಾತಿಯಿಂದ ಕ್ರೂಢೀಕರಣವಾಗಿ ಉತ್ತರ ಕರ್ನಾಟಕ ಅಭಿವೃದ್ಧಿ ಕಂಡಿಲ್ಲ. ಜಾತಿ ಹೋಗಲಾಡಿಸಿ ನಾವೆಲ್ಲ ಒಗ್ಗಟ್ಟು ತೋರಿಸಿದ್ರೆ ರಾಜಕಾರಣಿಗಳು ಅಭಿವೃದ್ಧಿ ಪಡಿಸ್ತಾರೆ. ಇಲ್ಲದೇ ಹೋದಲ್ಲಿ ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದ ಮಹದಾಯಿ ಹಾಗೂ ಉತ್ತರ ಕರ್ನಾಟಕ ಎಂದೂ ಅಭಿವೃದ್ಧಿ ಕಾಣುವದಿಲ್ಲ ಅಂತಾ ಹೇಳಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ